ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗಣೇಶ ವಿಸರ್ಜನಾ ಮೆರವಣಿಗೆಗೆ ವರ್ತೂರ್ ಚಾಲನೆ

Mainashree
Updated On : 14 Sept 2013, 12:13 pm

ಕ.ಪ್ರ.ವಾರ್ತೆ ಕೋಲಾರ ಸೆ. 13
ಅಖಂಡ ಭಾರತ ವಿನಾಯಕ ಮಹಾಸಭಾದ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಅರ್ಥಪೂರ್ಣ ಹಾಗೂ ವಿಶಿಷ್ಟ ರೀತಿಯ,  ಗಣಪತಿ ಮೂರ್ತಿಗಳ ವಿಸರ್ಜನೆ ಕಾರ್ಯವು  ಅದ್ಧೂರಿ ಮೆರವಣಿಗೆಯೊಂದಿಗೆ ನೆರವೇರಿತು.
ಇಲ್ಲಿನ ಎಸ್.ಎನ್.ಆರ್ ವೃತ್ತ್ತದ ಪ್ರವಾಸಿ ಮಂದಿರದ ಮುಂಭಾಗ ಆಯೋಜಿಸಿದ್ದ ಗಣಪತಿ ವಿಗ್ರಹಗಳ ಮೆರವಣಿಗೆಗೆ ಶಾಸಕ ವರ್ತೂರು ಪ್ರಕಾಶ್ ಅವರು ಚಾಲನೆ ನೀಡಿದರು.
ನೆರೆದಿದ್ದ ನೂರಾರು ಮಂದಿ ಉತ್ಸಾಹಿ ಯುವಕರು ಶ್ವೇತ ಹಾಗೂ ಕೇಸರಿ ಉಡುಪುಗಳನ್ನು ತೊಟ್ಟು, ಜೈಕಾರಗಳನ್ನು ಕೂಗುತ್ತಾ, ಕಿವಿಗಡಕಿಚ್ಚುವ ತಮಟೆಗಳ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಾಗುವಾಗ ಸಾವಿರಾರು ಮಂದಿ ಸಾರ್ವಜನಿಕರು ವೀಕ್ಷಿಸಿದರು.
ವಿವಿಧ ಕ್ಷೇತ್ರದ ಪ್ರತಿನಿಧಿಗಳಾದ ಓಂಶಕ್ತಿ ಚಲಪತಿ, ಪ್ರಮೋದ್, ಮುಕುಂದ, ನಾಮಾಲು ಮಂಜು, ಬಾಬು, ಡಾ.ಶಿವಣ್ಣ, ಸಾಮಾ ಅನಿಲ್, ಓಂ ಪ್ರಕಾಶ್, ನಾಗ, ನರಸಿಂಹ, ರಮೇಶ್‌ರಾಜ್, ರವಿ, ನಾಗೇಂದ್ರ, ವಿಜಯಕುಮಾರ್, ಸತೀಶ್, ಮಂಜುನಾಥ್, ಸಾಗರ್, ನರೇಶ್, ಶಿವಶಂಕರ್, ಮಹೇಶ್, ಧನು, ದೀಪು, ಕೊಂಡಿ ವೆಂಕಟೇಶ್, ರಜನಿ, ರಮೇಶ್, ಮಣಿ, ಮುರುಳಿ, ಪುನೀತ್, ಅನೀಶ್, ಕಿಶೋರ್, ಎಸ್.ಆರ್. ರಾಖೇಶ್ ಮುಂತಾದವರು ಮೆರವಣಿಗೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement