ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಾಗತೀಕರಣದಿಂದ ಕ್ಷಾರಿಕ ವೃತ್ತಿಗೆ ಕಂಟಕ: ಶಿವಶಂಕರರೆಡ್ಡಿ

Mainashree
Updated On : 14 Sept 2013, 12:14 pm

ಗೌರಿಬಿದನೂರು: ಜಾಗತೀಕರಣದ ಪ್ರಭಾವದಿಂದ ಕ್ಷೌರಿಕ ವೃತ್ತಿಗೆ ಕಂಟಕ ಎದುರಾಗಿದ್ದು, ಸವಿತಾ ಸಮಾಜ ತಮ್ಮ ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕಲ್ಪಿಸುವುದರ ಜೊತೆಗೆ ಇತರೆ ಕಸುಬುಗಳತ್ತ ಗಮನಹರಿಸಬೇಕೆಂದು ವಿಧಾನಸಭಾ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದ ಹೊಸಪೇಟೆಯಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘವು 15ನೇ ವಾರ್ಡ್‌ನಲ್ಲಿ ಹಮ್ಮಿಕೊಂಡಿದ್ದ ನೋಟ್‌ಪುಸ್ತಕ ವಿತರಿಸಿ ಮಾತನಾಡಿ, ಸವಿತಾ ಸಮಾಜದವರು ನೋಟ್‌ಪುಸ್ತಕ ವಿತರಿಸವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ಸಂಸದರು, ವಿಧಾನಪರಿಷತ್ ಸದಸ್ಯರಿಂದ, ಸಮುದಾಯ ಭವನ ನಿರ್ಮಿಸಲು 10 ಲಕ್ಷ ಅನುದಾನ ಕೊಡಿಸಬೇಕೆಂದು ಸಂಘಟಕರು ಇದೇ ಸಂದರ್ಭದಲ್ಲಿ ಶಾಸಕರನ್ನು ಮನವಿ ಮಾಡಿದರು.
ಮರಳೂರು ಹನುಮಂತರೆಡ್ಡಿ, ಶ್ರೀನಿವಾಸಮೂರ್ತಿ, ಮರಿಸ್ವಾಮಿ, ನಾಗಪ್ಪ, ಬಿ.ಡಿ. ಶಿವಕುಮಾರ್, ಜಿ.ಎಸ್. ನಾಗೇಶ್, ಆರ್.ಬಿ. ತ್ಯಾಗರಾಜ್, ಮೋಹನ್, ರಾಮು, ಕೃಷ್ಣಪ್ಪ, ಮಂಜುನಾಥ್, ವೇದಲವೇಣಿ ವೇಣು, ವೆಂಕಟ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement