ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜ್ಞಾನಾರ್ಜನೆಗೆ ಕುತೂಹಲ ಬೇಕು: ಡಾ. ರಘು

Mainashree
Updated On : 14 Sept 2013, 12:14 pm

ಮಾಲೂರು: ಕುತೂಹಲವೇ ಜ್ಞಾನಾರ್ಜನೆಗೆ ಮೂಲವಾಗಿದ್ದು, ವಿದ್ಯಾರ್ಥಿಗಳು ಎಲ್ಲ ವಿಷಯದ ಮೇಲೂ ಕುತೂಹಲ ಹೊಂದಿರಬೇಕು ಎಂದು ಡಾ. ಕೆ.ಸಿ.ರಘು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಯೋಜಕತ್ವದಲ್ಲಿ ಜೀವ- ಜೀವನ ವೈವಿಧ್ಯತೆ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬಹುತ್ವವೇ ಸ್ವರ್ಗ ಏಕತ್ವವೇ ನರಕ ಎಂಬ ವಿಷಯ ಬಗ್ಗೆ ಉಪನ್ಯಾಸ ನೀಡುತ್ತಾ, ಎಲ್ಲ ಗೊತ್ತು ಎನ್ನುವವನಿಗೆ ಗೊತ್ತಿರುವುದು ಅತಿ ಅಲ್ಪ. ಆದರೆ, ಗೊತ್ತಿಲ್ಲ ಎನ್ನುವ ಹತ್ತಿರ ಬಹಳಷ್ಟು ವಿಷಯಗಳಿಗೆ ಉತ್ತರ ಸಿಗಲಿದೆ ಎಂದರು.
ನಂತರ ಫ್ಲೈ ಅವೇ ಹೋಮ್ ಅವರಿಂದ ಜೀವಿಗಳ ಸಹಜ ಪರಿಸರ ಉಳಿಸಿ ಎಂಬ ಸಂದೇಶ ಸಾರುವ ಚಲನಚಿತ್ರ ಪ್ರದರ್ಶಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಶೇಖರ್ ನಂಗಲಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಶಿವಮೂರ್ತಿ, ಉಪನ್ಯಾಸಕರಾದ ಜಯರಾಂ ರೆಡ್ಡಿ, ಶಾಂತಕುಮಾರ್, ಮೀನಾಕುಮಾರಿ, ವಿಶ್ವೇಶ್ವರಯ್ಯ, ನಾಗರೆಡ್ಡಿ, ರಾಜ್‌ಗೋಪಾಲ್, ವಿನಯ್, ಮುನಿಯಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement