ಮಕ್ಕಳಿಗೆ ಸೋಲಾರ್ ದೀಪ, ಬ್ಯಾಗ್ ವಿತರಣೆ
ಚಿಂತಾಮಣಿ: ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಹಮ್ಮಿಕೊಂಡಿದ್ದ ಬಾಲಕಾರ್ಮಿಕರ ಪದ್ಧತಿ ನಿರ್ಮೂಲನೆ ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣೆ ಯೋಜನೆಯಡಿ ಬಡ ಸರ್ಕಾರಿ ಶಾಲಾ ಮಕ್ಕಳಿಗೆ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರು ಸೋಲಾರ್ ದೀಪ, ಬ್ಯಾಗ್ ವಿತರಿಸಿದರು.
ಬಳಿಕ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಇಂತಹ ಉತ್ತಮ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಿದ್ದಲ್ಲಿ ಗಡಿಭಾಗದ ಶಾಲಾ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ನಂತರ ಮಾತನಾಡಿದ ಮಾನ್ಸೆಂಟೋ ಕಂಪನಿಯ ವ್ಯವಸ್ಥಾಪಕ ಮಾದವರಾವ್, ಮಕ್ಕಳು ರಾತ್ರಿ ವೇಳೆ ಓದಲು- ಬರೆಯಲು ಸೋಲಾರ್ ದೀಪ ಸದುಪಯೋಗಪಡಿಸಿಕೊಂಡು ಉತ್ತಮ ಅಂಕ ಪಡೆಯಬೇಕೆಂದು ಹೇಳಿದರು. ಚಂದ್ರಾರೆಡ್ಡಿ, ಶ್ರೀನಿವಾಸರೆಡ್ಡಿ, ಶಾಲಾ ಮಕ್ಕಳಿಗೆ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹಸ್ತದಿಂದ ಸೋಲಾರ್ ದೀಪ, ಬ್ಯಾಗುಗಳನ್ನು ಉಚಿತವಾಗಿ ವಿತರಿಸಿದರು. ವಸಂತರೆಡ್ಡಿ, ಗ್ರಾಪಂ ಅಧ್ಯಕ್ಷ ಕೃಷ್ಣಾರೆಡ್ಡಿ, ಮುಖ್ಯ ಶಿಕ್ಷಕ ಶ್ರೀನಿವಾಸರೆಡ್ಡಿ, ಸುಲ್ತಾನ್, ಕೆ.ಎಸ್. ನೂರುಲ್ಲಾ ಇತರರು ಭಾಗವಹಿಸಿದ್ದರು.