5 ಮೇಕೆ ಸಾವು
ಟೇಕಲ್: ಮಾಸ್ತಿ ಮತ್ತು ಟೇಕಲ್ನಲ್ಲಿ ಮಳೆಯ ಆರ್ಭಟಕ್ಕೆ 5 ಮೇಕೆಗಳು ಮೃತಪಟ್ಟಿದ್ದು, 10 ಮನೆಗಳ ಗೋಡೆ ಕುಸಿದಿದೆ. ಮಾಸ್ತಿ ಸಮೀಪದ ನಟವರಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಿದ್ದ ಮಳೆಯಿಂದ ರಾಮಯ್ಯ ಎಂಬವರ ಮನೆಯ ಗೋಡೆ ಕುಸಿದಿದೆ. ಮಾಸ್ತಿ ಗ್ರಾಪಂ ವ್ಯಾಪ್ತಿಯ ಕತ್ತರಹಳ್ಳಿಯಲ್ಲಿ ಮಳೆಗೆ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.