ಪಾರಂಡಹಳ್ಳಿ: ಸ್ವಚ್ಛತಾ ಕಾರ್ಯಕ್ಕೆ ಚಾಲನೆ
ಕೆಜಿಎಫ್: ಕೆಜಿಎಫ್ ಕ್ಷೇತ್ರದ ಪಾರಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಪಾರಂಡಹಳ್ಳಿ ಗ್ರಾಮದ ವ್ಯವಸಾಯಿ ಉತ್ಪನ್ನ ಸೇವಾ ಸಹಕಾರ ಸಂಘದ ಕಾರ್ಯಾಲಯದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಅದೇ ರೀತಿ ಸುಮಾರು ವರ್ಷಗಳಿಂದ ಈ ವರೆಗೆ ಮಾಡದ ಚರಂಡಿ ಸ್ವಚ್ಛತೆ, ಗ್ರಾಮಸ್ಥರು ಓಡಾಡುವ ರಸ್ತೆಗಳು ಸ್ವಚ್ಛತೆ , ದಾರಿ ದೀಪ ದುರಸ್ಥಿ ಮುಂದಾದ ಸ್ವಚ್ಛತಾ ಕೆಲಸವನ್ನು ಮಾಡಲಾಯಿತು. ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಕೃಷ್ಣಾರೆಡ್ಡಿ ಇಂದೆಂದೂ ಕಾಣದ ಗ್ರಾಮ ಸ್ವಚ್ಛತಾ ಕೆಲಸವನ್ನು ತಾವು ನೂತನವಾಗಿ ಆಯ್ಕೆಯಾದ ನಂತರ ಪ್ರಥಮವಾಗಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಸೇರಿದಂತೆ ಗ್ರಾಮದ ಚರಂಡಿ, ರಸ್ತೆ, ದೀಪಗಳನ್ನು ದುರಸ್ತಿ ಮಾಡುವ ಕೆಲಸಕ್ಕೆ ಚಾಲನೆ ನೀಡಿರುವುದಾಗಿ ತಿಳಿಸಿದರು. ಅದೇ ರೀತಿ ಮುಂದಿನ ದಿನಗಳಲ್ಲಿ ಪಾರಂಡಹಳ್ಳಿ ಗ್ರಾಮದಲ್ಲಿ ವಾಸಿಸುವ ಎಲ್ಲಾ ಗ್ರಾಮಸ್ಥರ ಮನೆಗಳಿಗೆ ಮತ್ತು ಬೀದಿಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆ ಹಾಗೂ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.