ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕನ್ನಡಿಗರ ಮಹಾ ಸಮ್ಮೇಳನ ಪೂರ್ವಭಾವಿ ಸಭೆ

Mainashree
Updated On : 16 Sept 2013, 12:09 pm

ಕ.ಪ್ರ. ವಾರ್ತೆ, ಚಿಂತಾಮಣಿ, ಸೆ.15
ಕನ್ನಡ ನೆಲ, ಜಲ, ಭಾಷೆ ಗಡಿನಾಡು ಮತ್ತು ಶಾಶ್ವತ ನೀರಾವರಿ ಹೋರಾಟಕ್ಕೆ ಕನ್ನಡ ಜಾಗೃತಿ ವೇದಿಕೆಯ ಕಾರ್ಯಕರ್ತರು ಒಗ್ಗಟ್ಟಿನಿಂದ ಹೋರಾಟ ನಡೆಸಲು ಮುಂದಾಗಬೇಕೆಂದು ವೇದಿಕೆಯ ರಾಜ್ಯಾಧ್ಯಕ್ಷ ಕೆ.ಮಂಜುನಾಥ್ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ತಾಲೂಕು ಮಟ್ಟದ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಡಿಸೆಂಬರ್ 1 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ವಿಶ್ವ ಕನ್ನಡಿಗರ ಮಹಾ ಸಮ್ಮೇಳನಕ್ಕೆ ಕಾರ್ಯಕರ್ತರು ಸಂಘಟಿಸಲು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಧ್ಯಕ್ಷ ಮಾಡಿಕೆರೆ ನಾಗರಾಜ್, ತಾಲೂಕು ಅಧ್ಯಕ್ಷ ಆರ್.ನಾಗರಾಜ್, ಸಂಘಟನೆಯನ್ನು ಗ್ರಾಮೀಣ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಬಲಪಡಿಸಲು ಚರ್ಚಿಸಿದರು. ಜಿಲ್ಲಾ ಜಾಗೃತಿ ಮಹಿಳಾ ಸಂಘಟನೆಯ ಅಧ್ಯಕ್ಷನ್ನಾಗಿ ಮಂಗಳ ಪ್ರಕಾಶ್ ಅಧಿಕೃತವಾಗಿ ಘೋಷಿಸಿದರು. ನಂತರ ರಾಜ್ಯಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ಅಶ್ವಥ್, ರವಿ, ಬಷೀರ್, ಕನ್ನಡ ಸೋಮು, ತಿನಕಲ್ ವೆಂಕಟೇಶ್, ಕೋಡಿಹಳ್ಳಿ ನಾಗರಾಜ್, ಆಂಜನೇಯರೆಡ್ಡಿ, ಮಂಜು ಭಾರ್ಗವಿ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement