ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 16 Sept 2013, 12:09 pm

ಪ್ರಕಟವಾಗದ ಪದವಿ ಫಲಿತಾಂಶ
ಕೋಲಾರ: ಪರೀಕ್ಷೆ ಮುಗಿದು ನಾಲ್ಕು ತಿಂಗಳಾದರೂ ಫಲಿತಾಂಶ ನೀಡಲಾಗದ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯಿಂದ ನಗರದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ಕೋಲಾರ ಜಿಲ್ಲೆಯ ಮಹಿಳಾ ಕಾಲೇಜು ಸೇರಿದಂತೆ 665 ಕಾಲೇಜುಗಳ ಸುಮಾರು 3 ಲಕ್ಷ ಪದವಿ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಬಿಎ, ಬಿಕಾಂ, ಬಿಎಸ್ಸಿಯ 2ನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದು ನಾಲ್ಕು ತಿಂಗಳಾಗುತ್ತಾ ಬಂದರೂ ಬೆಂಗಳೂರು ವಿವಿಯ ಆಡಳಿತ ಮಂಡಳಿಯವರು ಫಲಿತಾಂಶ ನೀಡಬೇಕೆಂಬುದನ್ನೇ ಮರೆತಿರುವುದರಿಂದ ವಿದ್ಯಾರ್ಥಿಗಳು ಸಂಕಟಕ್ಕೆ ಸಿಲುಕಿದ್ದಾರೆ. ಕಲಾ, ವಾಣಿಜ್ಯ, ವಿಜ್ಞಾನ, ತಾಂತ್ರಿಕ ಎಲ್ಲಾ ವಿಭಾಗಗಳು ಸೇರಿದರೂ ಕೇವಲ 3 ವಿದ್ಯಾರ್ಥಿಗಳ ಸಂಖ್ಯೆ ಹೊಂದಿರುವ ಬೆಂಗಳೂರು ವಿವಿಗೆ ಪರೀಕ್ಷೆ ಮುಗಿದು ಫಲಿತಾಂಶ ನೀಡಲು ಏಕೆ ಸಾಧ್ಯವಾಗುತ್ತಿಲ್ಲವೆಂಬುದು ಯಕ್ಷ ಪ್ರಶ್ನೆಯಾಗಿದೆ. ಫಲಿತಾಂಶ ನೀಡಲು 4 ತಿಂಗಳು ತೆಗೆದುಕೊಳ್ಳುವ ವಿವಿ, ಫಲಿತಾಂಶ ನೀಡಿದರೂ, ಅಂಕಪಟ್ಟಿಯಲ್ಲಿ ಆಂತರಿಕ ಅಂಕಗಳ ನಮೂದಾಗದೇ, ಪರೀಕ್ಷೆಗೆ ಹಾಜರಾಗಿದ್ದರೂ, ಗೈರು ಎಂದು ನೀಡಿ ವಿದ್ಯಾರ್ಥಿಗಳನ್ನು ಮತ್ತಷ್ಟು ಆತಂಕಕ್ಕೆ ನೂಕುತ್ತಿದೆ. ಇತ್ತೀಚೆಗೆ ವಿವಿ ಅಕಾಡೆಮಿಕ್ ಕೌನ್ಸಿಲ್‌ಗೆ ಜಿಲ್ಲೆಯ ಹಿರಿಯ ಶಾಸಕ ರಮೇಶ್‌ಕುಮಾರ್ ಅವರನ್ನು ನೇಮಿಸಿರುವುದು ಸ್ವಾಗತಾರ್ಹವಾಗಿದ್ದು, ಇವರಾದರೂ ವಿವಿ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಿ ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
ಕಾರ್ಯವೈಖರಿಗೆ ಖಂಡನೆ
ಕೋಲಾರ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ಮರಳು ಲಾರಿಗಳು ಚಲಿಸಿದರೂ ಕ್ರಮ ಕೈಗೊಳ್ಳದ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು(ಆರ್‌ಟಿಒ) ತರಕಾರಿ, ಹೂವು ಸಾಗಿಸುವ ಟೆಂಪೋಗಳು, ಜನರನ್ನು ಸಾಗಿಸುವ ಗುಡ್ಸ್ ಆಟೋಗಳನ್ನು ತಡೆದು ದರ್ಪ ತೋರಿಸುತ್ತಿದ್ದಾರೆಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ. ಒಂದೇ ಒಂದು ಮರಳು ಲಾರಿಯನ್ನು ನಿಲ್ಲಿಸಲಿಲ್ಲ ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಆರ್‌ಟಿಒ ಅಧಿಕಾರಿಗಳಿಗೆ ಧೈರ್ಯ ತುಂಬಿ ಮರಳು ಲಾರಿ ಹಾಗೂ ಅನಧಿಕೃತ ಖಾಸಗಿ ಬಸ್ಸುಗಳ ವಿರುದ್ಧ ಕ್ರಮಕ್ಕೆ ಸೂಚಿಸಬೇಕೆಂದು ರೈತ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ನಾರಾಯಣಗೌಡ, ವಿದ್ಯಾರ್ಥಿ ಮುಖಂಡ ಹೂಹಳ್ಳಿ ನಾಗರಾಜ್, ಮೂರಾಂಡಹಳ್ಳಿ ಶಿವಾರೆಡ್ಡಿ, ಜಿಲ್ಲಾ ಮುಂಖಡ ನರಸಾಪುರ ಪುರುಷೋತ್ತಮ್, ಬೇತಮಂಗಲ ಮಂಜುನಾಥ, ಕೂಳೂರು ಗಣೇಶ್ ಈಕಂಬಳ್ಳಿ ಮಂಜುನಾಥ, ತೆರನಹಳ್ಳಿ ವೆಂಕಟೇಶಗೌಡ(ವೆಂಕಿ), ನಿಲಕಂಠಪುರ ಮುನೇಗೌಡ, ಭಕ್ತನ್ ಒತ್ತಾಯಿಸಿದ್ದಾರೆ.

ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಆಗ್ರಹ
ಚಿಂತಾಮಣಿ: ಅತಿಥಿ ಉಪನ್ಯಾಸಕರ ಸಂಬಳವನ್ನು 15 ಸಾವಿರದಿಂದ 20 ಸಾವಿರದವರೆಗೂ ಏರಿಸುವಂತೆ ವಿಧಾನಪರಿಷತ್ ಸದಸ್ಯ ಹಾಗೂ ಮುಖ್ಯ ಸಚೇತಕರು ಆಗಿರುವ ಡಾ.ಶಿವಯೋಗಿಸ್ವಾವು ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪನ್ಯಾಸಕರ ಭದ್ರತೆ ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳು ಈಡೇರಿಸಲು ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸರ್ಕಾರದ ಜೊತೆ ಮಾತನಾಡಿ ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆಂದು ಹೇಳಿದರು.
ಸತ್ಯನಾರಾಯಣ ಮಹೇಶ್, ಬಿ.ಜನಾರ್ದನರೆಡ್ಡಿ, ವೆಂಕಟೇಶ್ ಶೌರ್ಯ, ತಾಲೂಕು ಅಧ್ಯಕ್ಷ ನಾ.ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡರಾದ ಬಿ.ಎನ್. ಶ್ರೀನಿವಾಸಪ್ಪ, ಮಾಡಿಕೆರೆ ಅರುಣಕುಮಾರ್, ಶಿವಣ್ಣ, ಕುರುಟಹಳ್ಳಿ ಮಂಜು, ವೆಂಕಟರವಣ, ಮುನಿಯಪ್ಪ ಸೇರಿದಂತೆ ಇತರರು ಇದ್ದರು.

ಮೂಲ ಸೌಕರ್ಯಕ್ಕೆ ಆದ್ಯತೆ: ಶಿವಶಂಕರೆಡ್ಡಿ
ಗೌರಿಬಿದನೂರು: ನಾಗಯ್ಯರೆಡ್ಡಿ ಬಡಾವಣೆಯ ಅಭಿವೃದ್ಧಿಗೆ ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಕಾಮಗಾರಿ ಮಂಜೂರು ಮಾಡಿಸಿದ್ದೇನೆ. ಇನ್ನಷ್ಟು ಮೂಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಹಾಗೂ ಶಾಸಕ ಎನ್.ಎಚ್.ಶಿವಶಂಕರೆಡ್ಡಿ ತಿಳಿಸಿದರು.
1ನೇ ವಾರ್ಡ್‌ನ ನಾಗಯ್ಯರೆಡ್ಡಿ ಬಡಾವಣೆಯಲ್ಲಿ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು. ಅಲ್ಲದೆ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ನಾಗಯ್ಯರೆಡ್ಡಿ ಬಡಾವಣೆಯ ನಾಗರಿಕರು, ವಿಧಾನಸಭೆಯ ಉಪಾಧ್ಯಕ್ಷರಾದ ಎನ್.ಎಚ್. ಶಿವಶಂಕರರೆಡ್ಡಿ ಅವರನ್ನು ಸನ್ಮಾನಿಸಿದರು. ಕಾಂಗ್ರೆಸ್ ಹಿರಿಯ ಮುಖಂಡರಾದ ಎಸ್.ಎ. ಅಶ್ವತ್ಥನಾರಾಯಣಶೆಟ್ಟಿ, ಜಿ.ವಿ. ಕೃಷ್ಣ ಮೂರ್ತಿ, ಬಿ.ಆರ್. ಶ್ರೀನಿವಾಸ್ ಮೂರ್ತಿ, ಪ್ರಕಾಶ್‌ರೆಡ್ಡಿ, ತಾಪಂ ಅಧ್ಯಕ್ಷ ನಿರಂಜನ್, ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ಜಯಂದರ್, ವಿ. ರಮೇಶ್, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ತಾಪಂ ಇಒ ರೆಡ್ಡೆಪ್ಪ, ಆಹಾರ ಇಲಾಖೆಯ ಸತ್ಯನಾರಾಯಣಶೆಟ್ಟಿ, ಎಂ.ಮುನಿರಾಜು  ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement