ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಐಡಿ ಸಂಕೀರ್ಣ ದುರಸ್ತಿಗೆ ವ್ಯಾಪಾರಿಗಳ ಆಗ್ರಹ

Mainashree
Updated On : 16 Sept 2013, 11:48 am

ಮಾಲೂರು: ಇಲ್ಲಿನ ಪುರಸಭೆಯ ಅಸಮರ್ಪಕ ನಿರ್ವಹಣೆಯಿಂದ ಪಟ್ಟಣದ ಐಡಿ ಸಮಿತಿ ಸಂಕೀರ್ಣದ ಮೇಲ್ಭಾಗ ಸಂಪೂರ್ಣ ಹಾಳಾಗಿದ್ದು, ಮಳೆ ಮುಂದುವರಿದರೆ ಕುಸಿದು ಬೀಳುವ ಸಂಭವವಿದೆ ಎಂದು ಮಳಿಗೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.
2000 ನೇ ವರ್ಷದಲ್ಲಿ ಅಂದಿನ ಶಾಸಕ ಎ. ನಾಗರಾಜ್ ಅವರ ಆಡಳಿತವಾಧಿಯಲ್ಲಿ ಉದ್ಘಾಟನೆಗೊಂಡ ಈ ಐಡಿ ಸಮಿತಿ ಮಳಿಗೆ ಹಲವು ವರ್ಷಗಳಲ್ಲಿ ಬಹಳಷ್ಟು ಬಾರಿ ರಿಪೇರಿ ಭಾಗ್ಯ ಕಂಡಿದೆ. ಹಲವು ಮಳಿಗೆಗಳ ಸೋರಿಕೆಯಿಂದಾಗಿ ಮಳಿಗೆದಾರರು ಸಾವಿರಾರು ರು.ಗಳ ನಷ್ಟ ಅನುಭವಿಸಿದ್ದಾರೆ. ಪಟ್ಟಣದಲ್ಲಿ ಒಂದು ವಾರದಿಂದ ಬೀಳುತ್ತಿರುವ ಮಳೆಗೆ ಸಂಕೀರ್ಣದ ಮೇಲ್ಭಾಗದ ಚಾವಣಿಯಲ್ಲಿ ಬೆಳೆದಿದ್ದ ಹುಲ್ಲಿನಿಂದಾಗಿ ನೀರು ಸೋರುತ್ತಿದೆ.ಅದರಲ್ಲೂ ಹೆಗ್ಗಣಗಳು ಮೇಲ್ಭಾಗದ ಗೋಡೆಗಳಲ್ಲಿ ಬಿಲ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಚಾವಣಿ, ಗೋಡೆ ರ್ದುಬಲಗೊಳಿಸಿದ್ದು, ಯಾವೂದೇ ಕ್ಷಣದಲ್ಲಿ ಬೀಳುವ ಹಂತ ತಲುಪಿದೆ.
ಈ ಬಗ್ಗೆ ಪುರಸಭೆಯ ಅಭಿಯಂತರ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುಂದು ಮಳಿಗೆದಾರರ ಆರೋಪ.
ಪಟ್ಟಣದಲ್ಲಿ ಪುರಸಭೆಗೆ ಆದಾಯ ಒದಗಿಸುವುದರಲ್ಲಿ ಮೊದಲು ಸ್ಥಾನದಲ್ಲಿರುವ ಈ ಸಂಕೀರ್ಣದಲ್ಲಿ ಮಳಿಗೆದಾರರು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಕಳೆದ ವಾರ ಮಳೆಯಿಂದ ಸಂಕೀರ್ಣದ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಇಲ್ಲಿನ ಸಮಸ್ಯೆಗಳ ಬಗ್ಗೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ತಕ್ಷಣ ಪುರಸಭೆಯವರು ಮುಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಮಳಿಗೆದಾರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement