ಫಲಿತಾಂಶ ಪ್ರಕಟಿಸಲು ಆಗ್ರಹಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ, ಕೆಜಿಎಫ್, ಸೆ.16
ಬೆಂಗಳೂರು ವಿವಿ ಹಲವು ಪದವಿ ತರಗತಿಗಳ ಫಲಿತಾಂಶ ಪ್ರಕಟಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕೆಜಿಎಫ್ನ ನಾಡ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಪರೀಕ್ಷೆ ಮುಗಿದು ಕಾಲೇಜುಗಳು ಪ್ರಾರಂಭವಾಗಿ 3 ತಿಂಗಳು ಕಳೆಯುತ್ತಿದ್ದರೂ ಬಿಬಿಎಂ 2ನೇ ಸೆಮಿಸ್ಟರ್ ಫಲಿತಾಂಶ ಹೊರತುಪಡಿಸಿ ಬಿಕಾಂ, ಬಿಎ, ಬಿಎಸ್ಸಿ 2ನೇ ಸೆಮಿಸ್ಟರ್ ಮತ್ತು 4ನೇ ಸೆಮಿಸ್ಟರ್ ಫಲಿತಾಂಶವನ್ನು ಬೆಂಗಳೂರು ವಿವಿ ಪ್ರಕಟಿಸದೆ ವಿಳಂಬ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದರು.
ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ದೃಷ್ಟಿಯಿಂದ ಫಲಿತಾಂಶವನ್ನು ಕೂಡಲೇ ಪ್ರಕಟಿಸಬೇಕು ಎಂದು ಒತ್ತಾಯಿಸಿ ಜಿಲ್ಲಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವುದಾಗಿ ಎಬಿವಿಪಿ ಜಿಲ್ಲಾ ಸಂಚಾಲಕ ಸುನಿಲ್ಕುಮಾರ್ ತಿಳಿಸಿದರು. ಮನವಿ ಪತ್ರವನ್ನು ನಾಡ ಕಚೇರಿ ಉಪ ತಹಸೀಲ್ದಾರ್ ಇನಾಯತ್ತುಲ್ಲಾಖಾನ್ ಅವರಿಗೆ ಸಲ್ಲಿಸಿದರು.
ಸುಬ್ರಮಣಿ, ದಿಲೀಪ್, ಅಭಿಷೇಕ್, ನವೀನ್, ಗಂಗಾಧರ್, ಹರೀಶ್, ಅನಿಲ್, ಮಹೇಶ್, ಹನುಮಂತು, ಗಂಗಾಧರ್, ಕುಮಾರ್ ಇದ್ದರು.