ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಸ್ ಡಿಕ್ಕಿ: ಪೇಪರ್ ಹಂಚುವ ವ್ಯಕ್ತಿ ಸಾವು

Mainashree
Updated On : 16 Sept 2013, 11:46 am

ಕ.ಪ್ರ.ವಾರ್ತೆ  ಟೇಕಲ್  ಸೆ. 16
ಮಾಲೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ ಎಂ.ವಿ. ಗೋವಿಂದರಾಜು ಸ್ವಗ್ರಾಮ ಮಾಸ್ತಿಯಲ್ಲಿ ದಿನಪತ್ರಿಕೆ ಹಾಕುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹರಿದು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಮಾಸ್ತಿಯ ವಜ್ರವೇಲು ಎಂಬವರ ಮಗನಾದ ಗೋವಿಂದರಾಜು ಸೋಮವಾರ ಬೆಳಗ್ಗೆ ಪ್ರತಿದಿನದಂತೆ ದಿನಪತ್ರಿಕೆ ಹಂಚುತ್ತಿದ್ದ. ಖಾಸಗಿ ಬಸ್ ಚಾಲಕನಿಗೆ ಪೇಪರ್ ಬಂಡಲ್ ನೀಡುತ್ತಿದ್ದಾಗ ಹಿಂದೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದು ಆತ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಈ ಕುರಿತು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಸಂತಾಪ: ಮಾಸ್ತಿ ಗ್ರಾಮದ ದಿನಪತ್ರಿಕೆ ಹಾಕುತ್ತಿದ್ದ ಗೋವಿಂದರಾಜು ಮೃತಪಟ್ಟ ಹಿನ್ನೆಲೆಯಲ್ಲಿ ಟೇಕಲ್ ಪತ್ರಕರ್ತರ ವೇದಿಕೆಯ ಟೇಕಲ್ ಲಕ್ಷ್ಮೀಶ್, ಮಂಜುನಾಥ್, ವೈ.ಸಿ. ರಾಮಕೃಷ್ಣ, ಸಂದೀಪ್ ಅವರು ಸಂತಾಪ ಸೂಚಿಸಿದ್ದಾರೆ.
ಕಾಲೇಜಿಗೆ ರಜೆ: ಮಾಸ್ತಿ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಮಾಲೂರಿನ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಗೋವಿಂದ್ ಗೌರವಾರ್ಥ ಕಾಲೇಜಿಗೆ ಸೋಮವಾರ ರಜೆ ಘೋಷಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement