ಶಾಸಕ ನಾರಾಯಣಸ್ವಾಮಿಗೆ ಸನ್ಮಾನ
ಬಂಗಾರಪೇಟೆ: ತುಮಕೂರಿನ ಶ್ರೀ ಹರ್ತಿ ಪತ್ತಿನ ಸಹಕಾರ ಸಂಘದ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಂಗಾರಪೇಟೆ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಶಾಸಕರನ್ನು ಸತ್ಕರಿಸಿ ಮಾತನಾಡಿ ನಾರಾಯಣಸ್ವಾಮಿ ಪುರಸಭೆ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿ ಜನಮನ್ನಣೆ ಗಳಿಸಿ ಇಂದು ಶಾಸಕರಾಗಿದ್ದಾರೆ. ಇವರ ಜನಪರ ಕಾಳಜಿಯನ್ನು ಮೆಚ್ಚಿ ಹಾಗೂ ಇವರು ತಮ್ಮ ಟ್ರಸ್ಟ್ ವತಿಯಿಂದ ಮಾಡುತ್ತಿರುವ ಸಮಾಜ ಸೇವೆ ಇತರೇ ಪ್ರತಿನಿಧಿಗಳಿಗೆ ಆದರ್ಶವಾಗಿದ್ದಾರೆ ಇವರ ಸೇವೆ ನಿರಂತರವಾಗಿ ಸಾಗಲಿ ಎಂದರು.
ನಿಗಮ, ಮಂಡಳಿ ಅಧ್ಯಕ್ಷರ ಸ್ಥಾನಗಳಿಗೆ ನಡೆಯುವ ಪ್ರಕ್ರಿಯೆಯಲ್ಲಿ ನಾರಾಯಣಸ್ವಾಮಿರವರಿಗೆ ಜಬಾವ್ದಾರಿ ನೀಡಿ ಅವರ ಸೇವೆಯನ್ನು ಇಡೀ ರಾಜ್ಯ ಮಟ್ಟಕ್ಕೆ ದಕ್ಕುವಂತೆ ಮಾಡುವುದಾಗಿ ಅವರು ಹೇಳಿದರು. ಈ ವೇಳೆ ಮಾಜಿ ಪೌರಾಧ್ಯಕ್ಷ ಕೆ. ಚಂದ್ರಾರೆಡ್ಡಿ, ಚಲವಾದಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.