ಸುದ್ದಿ ಸಂಕ್ಷೇಪ
ಬೈಕ್‌ಗಳ ಡಿಕ್ಕಿ: ಸವಾರ ಸಾವು
ಕೆಜಿಎಫ್: ದ್ವಿಚಕ್ರ ವಾಹನಗಳು ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬನು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯ ಕೋರಮಂಡಲ್ ಬಡಾವಣೆಯ ನಿವಾಸಿ ಮುತ್ತು ಎಂಬವರ ಮಗನಾದ ಅರುಣ್‌ಕುಮಾರ್(24) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಅರುಣ್‌ಕುಮಾರ್ ತಮಿಳುನಾಡಿನ ಚೆನ್ನೈನಲ್ಲಿ ಕೆಲಸ ಮಾಡಿಕೊಂಡಿದ್ದು, ತಮ್ಮ ದೊಡ್ಡಪ್ಪ ನಿಧನರಾದ ಕಾರಣ ಕೆಜಿಎಫ್‌ಗೆ ಬಂದಿದ್ದನು ಎನ್ನಲಾಗಿದೆ. ಕೃಷ್ಣಾವರಂ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ತಮ್ಮ ದೊಡಪ್ಪನ ಅಂತ್ಯಸಂಸ್ಕಾರ ಮುಗಿಸುಕೊಂಡು ಅರುಣ್‌ಕುಮಾರ್ ತನ್ನ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಕೋರಮಂಡಲ್‌ಗೆ ಬರುತ್ತಿದ್ದಾಗ ದಾಸರಹೋಸಹಳ್ಳಿ ಕಡೆಯಿಂದ ಬಂದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡ ಅರುಣ್‌ಕುಮಾರ್‌ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಉರಿಗಾಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
20 ಸಾವಿರ ಕಳವು
ಕೆಜಿಎಫ್: ಅಂಗಡಿಯ ಶೆಟರ್‌ಅನ್ನು ಒಡೆದು ಒಳ ಪ್ರವೇಶಿಸಿದ ಕಳ್ಳರು ಹಣದ ಪೆಟ್ಟಿಗೆಯಲ್ಲಿಟ್ಟಿದ್ದ ನಗದನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಜೆ.ಕೆ.ಪುರಂ ಗ್ರಾಮದಲ್ಲಿ ನಡೆದಿದೆ. ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಪೇಟ ರೋಡ್ ನಿವಾಸಿ ವಿಜಯಕುಮಾರ್ ಎಂಬವರು ಜೆ.ಕೆ.ಪುರಂ ಗ್ರಾಮದಲ್ಲಿ ಗೊಬ್ಬರದ ಅಂಗಡಿಯಿಟ್ಟಿದ್ದರು. ್ಟಗೆಯಲ್ಲಿಟ್ಟಿದ್ದ ಸುಮಾರು 20 ಸಾವಿರ ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ವಿಜಯಕುಮಾರ್ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.