ಬಿಜೆಪಿ ಕಾರ್ಯಕರ್ತರಿಂದ ನಮೋ ಹುಟ್ಟುಹಬ್ಬ
ಕೋಲಾರ: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯೂ ಆಗಿರುವ ನರೇಂದ್ರ ಮೋದಿ ಅವರ 64ನೇ ಹುಟ್ಟುಹಬ್ಬವನ್ನು ಜಿಲ್ಲಾ ಯುವಮೋರ್ಚಾ ವತಿಯಿಂದ ಮಂಗಳವಾರ ಆಚರಿಸಲಾಯಿತು. ನಗರದ ಡೂಂಲೈಟ್ ಬಳಿ ಇರುವ ಗಣೇಶ ಗುಡಿಯಲ್ಲಿ ಮೋದಿಯವರ ಹೆಸರಿನಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಕಾರ್ಯಕರ್ತರು ನಂತರ 101 ತೆಂಗಿನಕಾಯಿಗಳನ್ನು ಇಡುಗಾಯಿ ಒಡೆದು ವಿಜಯ ಸಾಧಿಸಲು ಶುಭ ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಪ್ರಧಾನ ಕಾರ್ಯದರ್ಶಿ ಶ್ರೀನಾಥ್, ನರೇಶ್, ಶಿವು, ಕೀಲುಕೋಟೆ ರವಿ, ವಿ.ಎಚ್.ಪಿ ಮುಕುಂದ, ಯಶ್ವಂತ್, ಮುರುಳಿ, ನಾಗೇಂದ್ರ, ಚಂದುಲಾಲ್, ಮಂಜು, ಬಾಲಾಜಿ, ಅಪ್ಪಿಗೌಡ, ಓಂಪ್ರಕಾಶ್, ಹೊಯ್ಸಳ ನಾಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಗೇರಿ ನಾರಾಯಣ ಸ್ವಾಮಿ ಮತ್ತು ನರಸಿಂಹರಾಜು, ಮು.ರಾಘವೇಂದ್ರ, ಜಯಶಂಕರ್, ನಗರ ಘಟಕದ ಅಧ್ಯಕ್ಷ ಜಯಂತಿಲಾಲ್ ಸೇರಿದಂತೆ ಮತ್ತಿತರರು ಈ ಪೂಜಾ ಕಾರ್ಯಕ್ರಮದಲ್ಲಿ ಇದ್ದರು.