ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ ಎಂವಿ ಜನ್ಮದಿನ ಆಚರಿಸದ್ದಕ್ಕೆ ಆಕ್ಷೇಪ

Mainashree
Updated On : 17 Sept 2013, 11:41 am

ಚಿಕ್ಕಬಳ್ಳಾಪುರ: ಈ ಬಾರಿ ಜಿಲ್ಲಾಡಳಿತ, ಮತ್ತು ತಾಲೂಕು ಆಡಳಿತ ಸರ್ ಎಂ.ವಿ. ಜನ್ಮ ದಿನಾಚರಣೆಯನ್ನು ಕೈಗೊಳ್ಳುವುದನ್ನು ಮರೆತಿರುವುದು ದುರದೃಷ್ಟಕರ ಎಂದು ರೈತ ಮುಖಂಡರು ವಿಷಾದ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಮುದ್ದೇನಹಳ್ಳಿಯಲ್ಲಿರುವ ಭಾರತ ರತ್ನ ಸರ್ ಎಂವಿ ಅವರ ಸಮಾಧಿ ಬಳಿಗೆ ತೆರಳಿ ಸರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ರೈತ ಮುಖಂಡರು, ಭಾರತ ರತ್ನ ಸರ್ ಎಂವಿ ಅವರನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮರೆತಿರುವುದು ನೈತಿಕ ದಿವಾಳಿತನ ತೋರಿಸುತ್ತದೆ. ಜಿಲ್ಲೆಯಲ್ಲಿ ಹುಟ್ಟಿ ನಾಡಿನ ಕೀರ್ತಿಯನ್ನು ದೇಶ- ವಿದೇಶಗಳಲ್ಲಿ ಮೆರೆದು, ಕನ್ನಂಬಾಡಿ ಅಣೆಕಟ್ಟು ಸೇರಿದಂತೆ ಹಲವಾರು ನೀರಾವರಿ ಯೋಜನೆಗಳನ್ನು ರೂಪಿಸಿ ಲಕ್ಷಾಂತರ ರೈತರ ಬದುಕಿಗೆ ಆಸರೆಯಾದ ಕನ್ನಡ ನಾಡಿನ ಏಕೈಕ ಮೇರು ವ್ಯಕ್ತಿ ಭಾರತ ರತ್ನರನ್ನು ಮರೆತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಅಸಮಾಧಾನ ಹೊರ ಹಾಕಿದರು. ರೈತ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ವಿ.ಆನಂದ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement