ಪ್ರಕೃತಿ ನಿರ್ನಾಮ, ನಾಗರಿಕತೆ ನಿರ್ಮಾಣ ಸರಿಯಲ್ಲ
ಮಾಲೂರು: ಪ್ರಕೃತಿ ನಿರ್ನಾಮದಿಂದ ನಾಗರಿಕತೆಯ ನಿರ್ಮಾಣವಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಮಾರುತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರಪ್ಪ ಹೇಳಿದರು.
ಪಟ್ಟಣದ ಮಾರುತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸ್ವಚ್ಛತೆ ಹಾಗೂ ಪರಿಸರ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಗರಿಕತೆ ಬೆಳದಂತೆ ಪ್ರಕೃತಿ ವಿನಾಶದ ಕಡೆ ಸಾಗುತ್ತಿದ್ದು, ಭವಿಷ್ಯದ ಜನಾಂಗಕ್ಕೆ ಮಾರಕವಾಗಲಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ವಿ. ರವೀಂದ್ರ ಮಾತನಾಡಿ, ಉತ್ತಮ ಜೀವನ ನಡೆಸಬೇಕಾದರೆ ಪರಿಸರದ ಸಮತೋಲನ ಮುಖ್ಯವಾಗಿದ್ದು, ಸ್ವಾರ್ಥಕ್ಕಾಗಿ ಒಂದು ಮರ ಕಡಿದರೆ ಇನ್ನೆರಡು ಗಿಡವನ್ನು ನಡೆಸುಲ ಮೂಲಕ ಪರಿಸರದ ಸಮತೋಲನ ಕಾಯ್ದು ಕೊಳ್ಳಬೇಕಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿ ಉಪಾನ್ಯಾಸಕ ವೀರಭದ್ರಚಾರಿ, ನಾಗರಾಜ್ ಮಾತನಾಡಿದರು. ಮುನಿಯಪ್ಪ, ಶ್ರೀನಿವಾಸ್, ಮಹತೇಶ್, ಸುಧಾಕರ್, ಶುಭಕರ ಸಿಂಧಿಯಾ, ಸತ್ಯನಾರಾಯಣ್, ಪಿ.ಎನ್. ದಾಸ್ ಇದ್ದರು.