ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಾಂಬಾರ್ ಪಾತ್ರೆಗೆ ಬಿದ್ದ ಮಗು ಆಸ್ಪತ್ರೆಗೆ

Vishwanath S
Updated On : 28 Sept 2013, 12:36 pm

ಮಾಲೂರು: ಅಡುಗೆ ಸಹಾಯಕಿಯೊಬ್ಬಳ ಮಗುವೊಂದು ಬಿಸಿಯೂಟಕ್ಕಾಗಿ ತಯಾರಾಗಿದ್ದ ಸಾಂಬಾರ್ ಪಾತ್ರೆಯಲ್ಲಿ ಬಿದ್ದ ಪರಿಣಾಮ ದೇಹ ಶೇ.80 ರಷ್ಟು ಭಾಗ ಸುಟ್ಟುಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ವತ್ರೆಗೆ ಸೇರಿಸಲಾಗಿದೆ.
ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಮಂಜುಳ ಎಂಬಾಕೆಯ ಮಗ ಮನೋಜ್ ಕುಮಾರ್ ಗೌಡ (3) ಸಾಂಬಾರ್ ಪಾತ್ರೆಗೆ ಬಿದ್ದ ಬಾಲಕನಾಗಿದ್ದಾನೆ. ದೇಹದ ಶೇ.80 ಭಾಗ ಸುಟ್ಟುಹೋಗಿರುವ ಮನೋಜ್ ಗೌಡನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ವತ್ರೆಗೆ ಸೇರಿಸಲಾಗಿದೆ.
ಘಟನೆ ವಿವಿರ: ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ 22 ವಿದ್ಯಾರ್ಥಿಗಳಿಗೆ ಎಂದಿನಂತೆ ಅಡುಗೆ ಸಹಾಯಕಿ ಮಂಜುಳಮ್ಮ ತನ್ನ ಮಗು ಮನೋಜ್‌ನ ಜತೆಯಲ್ಲಿ ಶಾಲೆಗೆ ಬಂದು ಅಡುಗೆಯ ತಯಾರಿ ಮಾಡುತ್ತಿದ್ದಳು. ಬಿಸಿ ಸಾಂಬಾರ್ ಪಾತ್ರೆ ಒಲೆಯಿಂದ ಕೆಳಗೆ ಇಳಿಸುವ ಸಂಧರ್ಭದಲ್ಲಿ ಆಟವಾಡುತ್ತ ಹಿಂದೆ ಹಿಂದೆ ಬರುತ್ತಿದ ಮನೋಜ್ ನ ಕಾಲು ಬಿಸಿ ಪಾತ್ರೆಗೆ ತಗಲುದಾಗ ನಿಯಂತ್ರಣ ತಪ್ಪಿದ ಮನೋಜ್ ಬಿಸಿ ಸಾಂಬಾರ್ ಪಾತ್ರೆಯಲ್ಲಿ ಹಿಮ್ಮುಖವಾಗಿ ಬಿದ್ದ ಎನ್ನಲಾಗಿದೆ. ಪಕ್ಕದಲ್ಲೇ ಇದ್ದ ತಾಯಿ ಮಂಜುಳಮ್ಮ ತಕ್ಷಣ ಗಮನಿಸಿ ಮಗುವನ್ನು ಪಾತ್ರೆಯಿಂದ ಎತ್ತುವ ವೇಳೆಗೆ ಮನೋಜ್‌ನ ಮುಖ ಬಿಟ್ಟು ದೇಹದ ಶೇ.80 ಭಾಗ ಸುಟ್ಟುಹೋಗಿದೆ ಎನ್ನಲಾಗಿದೆ.
ತೀವ್ರವಾಗಿ ಸುಟ್ಟಗಾಯಗಳಿಂದ ನರಳುತ್ತಿದ್ದ ಮನೋಜ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ವತ್ರೆಗೆ ಸೇರಿಸಲಾಗಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಾಯಿ ಮಂಜುಳಮ್ಮರವರ ಸಹೋದರ ರಾಮಣ್ಣ ದೂರವಾಣಿ ಮೂಲಕ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement