ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಾಮಾನ್ಯರಿಗೂ ಯೋಜನೆ ತಲುಪಲಿ

Vishwanath S
Updated On : 28 Sept 2013, 12:36 pm

ಗೌರಿಬಿದನೂರು: ಜನಸಾಮಾನ್ಯರಿಗೆ ಸರ್ಕಾರಿ ಯೋಜನೆಗಳು ತಲುಪುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ವಿಧಾಸಭಾ ಉಪಾಧ್ಯಕ್ಷರು, ಸ್ಥಳೀಯ ಶಾಸಕರೂ ಆದ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೇವಲ ಕಡತಗಳಲ್ಲಿ ಮಾತ್ರ ಅಭಿವೃದ್ಧಿಯಾಗುತ್ತಿದೆ. ಮೇಲ್ಮಟ್ಟದ ಅಧಿಕಾರಿಗಳು, ರಾಜಕಾರಣಿಗಳಿಂದ ಹಿಡಿದು ತಳಮಟ್ಟದ ಅಧಿಕಾರಿಗಳು ಹಾಗೂ ರಾಜಕಾರಣಿಗಳವರೆವಿಗೂ ಭ್ರಷ್ಟಾಚಾರ ಎಲ್ಲೆಮೀರುತ್ತಿದೆ ಕಡುಬಡವರಿಗೆ ಯಾವುದೇ ಯೋಜನೆ ತಲುಪುತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಅಕ್ಟೋಬರ್ 15ರ ಒಳಗೆ ಎಲ್ಲಾ ಇಲಾಖೆಯ ಕಚೇರಿಗಳಲ್ಲಿಯೂ ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳ ಪರಿಚಯದ ಬೋರ್ಡ್‌ಗಳು ಕಾಣಬೇಕು. ಮುಂದಿನ ತಿಂಗಳಿನಿಂದ ನಾನು ಪ್ರತಿ ಗ್ರಾಪಂನಲ್ಲಿಯೂ ಪ್ರಗತಿ ಪರಿಶೀಲನಾ ಸಭೆ ಮಾಡುತ್ತೇನೆ. ಪ್ರತಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿಯನ್ನೊಳಗೊಂಡ ಪ್ಲೆಕ್ಸ್‌ಗಳು ಕಾಣಬೇಕು. ಈ ಸಂಬಂಧ ಜಿಪಂ ಸುತ್ತೋಲೆ ಹೊರಡಿಸಬೇಕು ಎಂದು ಜಿಪಂ ಅಧ್ಯಕ್ಷ ಚಿನ್ನಪ್ಪ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಅವರಿಗೆ ಸೂಚಿಸಿದರು.
ಈ ಬಗ್ಗೆ ಒಪ್ಪಿಗೆ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷ ಚಿನ್ನಪ್ಪಯ್ಯ ಮತ್ತು ಸಿಇಓ ನೀಲಾ ಮಂಜುನಾಥಥ್ ಜಿಪಂನಿಂದ ನಾಳೆಯೇ ಸುತ್ತೋಲೆ ಕಳುಹಿಸಲಾಗುವುದು ಎಂದರು. ತಾಲೂಕಿನ ಡಿಪಾಳ್ಯ ಹೋಬಳಿಯಲ್ಲಿ ಹಸುಗಳಿಗೆ ಕಾಲುಬಾಯಿ ರೋಗ ಬಂದು ಸಾವನ್ನಪ್ಪುತ್ತಿವೆ ಈ ಬಗ್ಗೆ ವ್ಯಾಪಕ ಪ್ರಚಾರದ ಅಗತ್ಯವಿದೆ. ಆದ್ದರಿಂದ ಪ್ರಚಾರ ಭಿತ್ತಿಪತ್ರಗಳ ಮೂಲಕ ರೈತರಿಗೆ ಗ್ರಾಮೀಣ ಪ್ರದೇಶದ ಜನರಿಗೆ ತಲುಪುವಂತೆ ಪ್ರಚುರಪಡಿಸಿ ಎಂದು ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ವೇಣುಗೋಪಾಲ್ ಅವರಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಕೆಲವೆಡೆ ಹೆಂಚಿನ ಚಾವಡಿಯ ಮುಂದೆ ನಡೆಸುತ್ತಿದ್ದಾರೆ, ಕೆಲವೆಡೆ ಮರದ ಕೆಳಗೆ ಪಾಠಮಾಡುತ್ತಿದ್ದಾರೆ ಕಟ್ಟಡಗಳು ಹಲವೆಡೆ ಇಲ್ಲ ಎಂದು ಜಿಪಂಸದಸ್ಯ ಕೇಶವರೆಡ್ಡಿ, ಚಿನ್ನಪ್ಪಯ್ಯ ಆರೋಪಿಸಿದಾಗ ಸಂಬಂಧಿಸಿದ ಇಲಾಖೆಗೆ ಈಗಾಗಲೇ ಮನವಿ ಮಾಡಿದ್ದು ತುರ್ತು ಕಟ್ಟಡ ನಿರ್ಮಾಣ ಮಾಡುವಂತೆ ಕೋರಿದ್ದೇನೆ ಎಂದು ಸಿಡಿಪಿಒ ತಿಳಿಸಿದರು.
ಶಿಕ್ಷಣ ಇಲಾಖೆ, ಮೀನುಗಾರಿಕೆ , ಕೃಷಿ, ತೋಟಗಾರಿಕೆ, ಕಾರ್ಮಿಕ, ಕೈಗಾರಿಕೆ, ರೇಷ್ಮೆ ಮುಂತಾದ ಇಲಾಖೆಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷರಾಘವೇಂದ್ರಹನುಮಾನ್, ತಾಪಂ ಅಧ್ಯಕ್ಷ ನಿರಂಜನ್, ತಾಪಂ ಕಾರ್ಯನಿರ್ವಹಣಾಧಿಕಾರಿ ರೆಡ್ಡಪ್ಪ, ಜಿಪಂ ಸದಸ್ಯ ಕೇಶವರೆಡ್ಡಿ, ರಜನಿವೇಣುಗೋಪಾಲರೆಡ್ಡಿ, ಚಿನ್ನಪ್ಪ್ಯಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement