ಇಂಧೋರ್ ಪದ್ಧತಿಯ ಕಾಂಪೋಸ್ಟೀಕರಣ
ಕೋಲಾರ: ತಾಲೂಕಿನ ಮುದುವತ್ತಿ ಗ್ರಾಮದಲ್ಲಿ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಆಯೋಜಿಸಲಾಗಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಡಾ.ಬಿ. ಕೃಷ್ಣಮೂರ್ತಿ ತಂಡದ ವಿದ್ಯಾರ್ಥಿಗಳು ಇಂಧೋರ್ ಪದ್ಧತಿಯ ಕಾಂಪೋಸ್ಟ್ ತಯಾರಿಕೆಯ ಪ್ರಾತ್ಯಕ್ಷಿಕೆ ಏರ್ಪಡಿಸಿ ರೈತರಲ್ಲಿ ಅರಿವು ಮೂಡಿಸಲಾಯಿತು.
ಏನಿದು ಇಂಧೋರ್ ಪದ್ಧತಿ: ಈ ವಿಧಾನ ಸರಳ ಕಾಂಪೋಸ್ಟ್ ತಯಾರಿಕಾ ವಿಧಾನಗಳಲ್ಲಿ ಒಂದು, ಇದು ಗಾಳಿಯಾಡಬಹುದಾದ ವಿಧಾನವಾಗಿದೆ, ಕಾಂಪೋಸ್ಟ್ ತಯಾರಿಕೆಗೆ 10-25ಅಡಿ ಉದ್ದ, 3-4 ಅಡಿ ಅಗಲ, ಹಾಗೂ 3 ಅಡಿ ಆಳವಾದ ಗುಂಡಿತೆಗೆಯಬೇಕಾಗುತ್ತದೆ. ತ್ಯಾಜ್ಯ ವಸ್ತುಗಳಾದ ತರಗೆಲೆ, ಬೆಳೆ ತ್ಯಾಜ್ಯ, ತರಕಾರಿ ತ್ಯಾಜ್ಯ, ಸಗಣಿ ಮತ್ತು ನೀರನ್ನು ಪದರ ಪದರವಾಗಿ ತುಂಬಬೇಕು, ಆಗಾಗ್ಗೆ ನೀರು ಚುಮುಕಿಸಬೇಕು 15 ದಿನಕೊಮ್ಮೆ ತ್ಯಾಜ್ಯ ವಸ್ತುಗಳನ್ನು ತಿರುವಿ ಹಾಕಬೇಕು, ನಾಲ್ಕು ತಿಂಗಳಲ್ಲಿ ಕಾಂಪೋಸ್ಟ್ ಸಿದ್ಧವಾಗುತ್ತದೆ.
ಕೃಷಿ ವಿಜ್ಞಾನಿಗಳಾದ ಡಾ.ಬಿ. ಕೃಷ್ಣಮೂರ್ತಿ, ಜಿ.ಆರ್. ಮಣ್ಣೂರ್, ಶಿವಮೂರ್ತಿನಾಯಕ್, ಡಾ. ನಾಗರಾಜಯ್ಯ ವಿದ್ಯಾರ್ಥಿಗಳು, ಗ್ರಾಪಂ ಸದಸ್ಯರಾದ ಚಿನ್ನಪ್ಪ, ಕೃಷ್ಣಪ್ಪ, ಶ್ರೀನಿವಾಸ್, ಶಿವಶಂಕರಯ್ಯ ಮತ್ತು ಪ್ರಗತಿಪರ ರೈತ ಎಚ್.ವಿ. ಶಂಕರಪ್ಪ, ಬಸವರಾಜು, ಮೈರಾಡಾದ ಇಮ್ರಾನ್ ಪ್ರಾತ್ಯಕ್ಷಿಕೆಯನ್ನು ಗಮನಿಸಿದರು.