ಜನತೆ ಹಸಿವು ಹಿಂಗಿಸುವ ಕಾಯಕ ರೈತರದ್ದು
ಕ.ಪ್ರ. ವಾರ್ತೆ, ಮಾಲೂರು, ಸೆ.29
ದೇಶ ಕಾಯುವ ಯೋಧ ಹಾಗೂ ಜೀವನ ಸವೆಸುವ ರೈತರಿಗೆ ನಮ್ಮ ಸಮಾಜದಲ್ಲಿ ತಕ್ಕ ಗೌರವ ನೀಡದಿರುವುದು ವಿಷಾದಿನೀಯ ಎಂದು ಮಾಜಿ ಸೈನಿಕ ವೈದ್ಯ ಡಾ. ಗೋವಿಂದರಾಜನ್ ಹೇಳಿದರು.
ಇಲ್ಲಿನ ಚುಟುಕ ಸಾಹಿತ್ಯ ಪರಿಷತ್ ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜೈ ಜಸಾನ್ ಜೈ ಕಿಸಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದಡೆ ಶತ್ರು ದೇಶಗಳಿಂದ ನಮ್ಮ ದೇಶವನ್ನು ಕಾಯ್ದು ನಮ್ಮ ನೆಮ್ಮದಿ ಜೀವನಕ್ಕೆ ಸೈನಿಕರು ಕಾರಣವಾಗುತ್ತಿದ್ದು, ಇನ್ನೊಂದೆಡೆ ರೈತರು ತಮ್ಮ ಜೀವವನ್ನು ತೈದು ಕೃಷಿಯ ಮೂಲಕ ದೇಶದ ಜನತೆಯ ಹಸಿವನ್ನು ಹಿಂಗಿಸುವ ಕಾಯಕ ಮಾಡುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಹಾಗೂ ಉಳಿವಿಗಾಗಿ ಜೀವ ನೀಡುತ್ತಿರುವ ನಮ್ಮ ಕಿಸಾನ್ ಜವಾನ್‌ರಿಗೆ ಸಮಾಜದಲ್ಲಿ ತಕ್ಕ ಗೌರವ ನೀಡದಿರುವುದು ನಮ್ಮಗೆ ನಾವೇ ಅವಮಾನಪಡಿಸಿಕೊಡಂತೆ ಎಂದರು.
ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಕೃಷ್ಣಪ್ಪ ಮಾತನಾಡಿ, ಸೈನಿಕರು ನಮ್ಮ ದೇಶವನ್ನು ಕಾಯುತ್ತಿದ್ದರೆ ನಮ್ಮ ಸಾಹಿತಿಗಳು ತಮ್ಮ ಸಾಹಿತ್ಯದ ಕಸಿಗಳಿಂದ ನಮ್ಮ ಭಾಷೆ-ಸಂಸ್ಕೃತಿಯನ್ನು ಉಳಿಯುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎ. ಅಶ್ವಥ್ ರೆಡ್ಡಿ, ಗಾಯಕ ಗುಲ್ಜಾರ್, ಪ್ರಗತಿಪರ ರೈತ ಗುಡ್ನಹಳ್ಳಿ ವೆಂಕಟೇಶ್, ಚೈತನ್ಯ ಕಲಾ ನಿಕೇತನ ಅಧ್ಯಕ್ಷ ಜ.ಮು. ಚಂದ್ರ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಡಿ. ನಾರಾಯಣಸ್ವಾಮಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ನಿವೃತ್ತ ಸೈನಿಕ ವೈದ್ಯ ಡಾ. ಗೋವಿಂದ ರಾಜನ್, ಪ್ರಗತಿ ಪರ ರೈತ ವೆಂಕಟೇಶ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕುಂ. ಚಂದ್ರಪ್ಪ ಪ್ರಸ್ತಾವಿಕ ಮಾತನ್ನಾಡಿದರು. ಕವಿಗಳಾದ ನಾ. ಮುನಿರಾಜು, ಕೆ. ಮುನಿಕೃಷ್ಣಪ್ಪ, ಮಾಸ್ತಿ ಕೃಷ್ಣಪ್ಪ, ಸುರೇಶ್ ಜಕಾತಿ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಡಿ.ಬಿ. ಪ್ರಸನ್ನ, ಕೊಳಾಲಪ್ಪ, ಸತೀಶ್ ಕಾಟೇರಿ, ಎಚ್. ಯೋಗಿಶ್ವರಯ್ಯ, ವಸಂತ ಕೋಡಿಹಳ್ಳಿ, ಉದಯಕುಮಾರ್ ನಾರಿಗಾನಹಳ್ಳಿ, ಸಿರಾಜ್ ಅಹಮದ್, ತಿಮ್ಮರಾಯಪ್ಪ ತಮ್ಮ ಕವನ ವಾಚಿಸಿದರು. ತಿಮ್ಮರಾಯಪ್ಪ ಕಾರ್ಯಕ್ರಮ ನಿರೂಪಿಸಿದರು. ನಾರಾಯಣಪ್ಪ ಸ್ವಾಗತಿಸಿ, ವಂದಿಸಿದರು.