ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನಪರ ಧೋರಣೆ ಹೊಂದಿದಾಗ ಬದಲಾವಣೆ ಸಾಧ್ಯ: ಆನಂದ

Vishwanath S
Updated On : 30 Sept 2013, 12:32 pm

ಚಿಂತಾಮಣಿ: ಸಾಹಿತ್ಯ ಪರಿವರ್ತನೆಯ ಆಂದೋಲನದಲ್ಲಿ ಒಂದು ಪ್ರಮುಖ ಪಾತ್ರ ವಹಿಸುವಂತಹದ್ದು, ಅಂತಹ ಆಂದೋಲನ ಸಂದರ್ಭದಲ್ಲಿ ಸಾಹಿತ್ಯ ಸಮಾಜಮುಖಿಯಾದ, ಜನಪರವಾದ ಧೋರಣೆಗಳನ್ನು ಹೊಂದಿದಾಗ ಮಾತ್ರ ಬದಲಾವಣೆ ತರಲು ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ(ಯುವ ಪುರಸ್ಕಾರ) ಯುವ ಸಾಹಿತಿ ಲಕ್ಕೂರು ಆನಂದ ಅಭಿಪ್ರಾಯಪಟ್ಟರು.
ತಾಲೂಕಿನ ಬೊಮ್ಮೇಕಲ್ಲು ಗ್ರಾಮದಲ್ಲಿ ಕ್ರಾಂತಿವೀರ ಭಗತ್ ಸಿಂಗ್ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಭಗತ್ ಸಿಂಗ್ 106ನೇ ಜನ್ಮ ದಿನಾಚರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಚಿಂತಾಮಣಿ ನಗರ ವಿಭಾಗದ ಆರಕ್ಷಕ ವೃತ್ತ ನಿರೀಕ್ಷಕ ನಂಜಪ್ಪ ಮಾತನಾಡಿ, ಬೊಮ್ಮೇಕಲ್ಲು ಗ್ರಾಮದ ಯುವಕರೆಲ್ಲ ಸೇರಿ ಕಟ್ಟಿಕೊಂಡಿರುವ ಕ್ರಾಂತಿವೀರ ಭಗತ್ ಸಿಂಗ್ ಯುವಕ ಸಂಘ ಇತರರಿಗೆ ಮಾದರಿಯಾಗಬೇಕಂದು ಕಿವಿಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳಾಡಿದ ಕ್ರಾಂತಿವೀರ ಭಗತ್ ಸಿಂಗ್ ಯುವಕ ಸಂಘದ ಅಧ್ಯಕ್ಷ ಬೊಮ್ಮೇಕಲ್ಲು ವೆಂಕಟೇಶ್ ಮಾತನಾಡಿ, ಕ್ರಾಂತಿ ಎಂದರೆ ಕುತ್ತಿ, ಗುರಾಣಿಗಳನ್ನು ಹಿಡಿದು ರಕ್ತದೋಕುಳಿಯಾಡುವುದಲ್ಲ, ಕ್ರಾಂತಿ ಎಂದರೆ ಬದಲಾವಣೆ ಈ ದೃಷ್ಟಿಕೋನದಲ್ಲಿ ಕ್ರಾಂತಿಗೆ ಒಂದು ಹೊಸ ಅರ್ಥವನ್ನು ಕೊಟ್ಟು ದೇಶಕ್ಕಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು ಶಹೀದ್ ಭಗತ್ ಸಿಂಗ್ ತ್ಯಾಗ ಅಮರ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಫಯಾಜುಲ್ಲಾ, ನಿಜಾಮುಲ್ಲಾ ಖಾನ್, ಆರ್. ಮಣಿ, ಹಾಲು ನಾರಾಯಣಸ್ವಾಮಿ, ನಾಗರಾಜ, ಟಿ. ರಾಮು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಶಾಮಣ್ಣ ವಹಿಸಿದ್ದರು. ಕ್ರಾಂತಿವೀರ ಭಗತ್ ಸಿಂಗ್ ಯುವಕರ ಸಂಘದ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement