ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುನಿಯಪ್ಪನವರ ಸಾಧನೆ ಶೂನ್ಯ: ವೀರಯ್ಯ

Vishwanath S
Updated On : 30 Sept 2013, 12:33 pm

ಮುಳಬಾಗಿಲು: ಕೇಂದ್ರ ಮಂತ್ರಿ ಕೆ.ಎಚ್. ಮುನಿಯಪ್ಪ ಅವರ ಸಾಧನೆ ಶೂನ್ಯವೆಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಆರೋಪಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾತನಾಡಿದ ಅವರು, ತಾವು ವಿಧಾನ ಪರಿಷತ್ ಸದಸ್ಯರಾಗಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಬಿಜೆಪಿ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಅವಲೋಕಿಸಿದಾಗ ಅವರಿಗಿಂತಲೂ ತಾವು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿರುವುದಾಗಿ ನುಡಿದರು. ಈ ಬಗ್ಗೆ ಬಹಿರಂಗ ಚರ್ಚೆಗೆ ತಾವು ಸಿದ್ಧವಾಗಿದ್ದೇನೆ. ಕೆ.ಎಚ್. ಮುನಿಯಪ್ಪ ಅವರು ಈ ಸವಾಲನ್ನು ಸ್ವೀಕರಿಸಲು ಕೋರಿದರು. ಕಾಂಗ್ರೆಸ್ ಕುತಂತ್ರದಿಂದ ಅಧಿಕಾರಕ್ಕೆ ಬಂದರೇ ಬಿಜೆಪಿಗೆ ಅಭಿವೃದ್ಧಿ ರಾಜಕಾರಣ ಮಾತ್ರ ತಿಳಿದಿದೆ ಎಂದರು.
ಕೆಜಿಎಫ್‌ನಲ್ಲಿ ಚಿನ್ನದ ಗಣಿ ಪುನರ್ ಆರಂಭಿಸುವ ಕುರಿತು ಕೇಂದ್ರ, ಸಚಿವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಸಚಿವ ಸಂಪುಟ ತೆಗೆದುಕೊಂಡಿರುವ ಸಂಪುಟದ ನಿರ್ಧಾರವನ್ನು ಬಹಿರಂಗಪಡಿಸಲು ಒತ್ತಾಯಿಸಿದರು. ತಾವು ಮುಂದಿನ ಲೋಕಸಭೆಗೆ ಕೋಲಾರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಹೈ ಕಮಾಂಡ್ ಇಚ್ಛೆ ಪಟ್ಟರೆ ಸ್ಪರ್ಧಿಸುವುದಾಗಿ ಹೇಳಿದರು.
ಮುಖಂಡರಾದ ಸಿ.ಕೆ. ರಾಧವಲ್ಲಭ. ಎಂ. ವೆಂಕಟೇಶ್, ಎಂ. ಪ್ರಸಾದ್, ಕೀಲಾಗಾಣಿ ನಾರಾಯಣಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement