ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅತಿವೃಷ್ಟಿ-ಅನಾವೃಷ್ಟಿ; ಅನ್ನದಾತ ಕಂಗಾಲು

Vishwanath S
Updated On : 1 Oct 2013, 12:58 pm

ಗೌರಿಬಿದನೂರು: ಸಾಂಪ್ರದಾಯಿಕ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಹೆಚ್ಚು ಉತ್ತೇಜನ ಹಾಗೂ ಆರ್ಥಿಕ ಸಹಾಯ ಮಾಡಬೇಕಾದ ಅವಶ್ಯಕತೆ ಇದೆ ಎಂದು ವಿಧಾನಸಭೆ ಉಪಾಧ್ಯಕ್ಷ ಎನ್.ಹೆಚ್.ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ಆತ್ಮಯೋಜನೆ ಅಡಿಯಲ್ಲಿ ಕೃಷಿ ಇಲಾಖೆ ವತಿಯಿಂದ  ಬೀಜ ಸುತ್ತು ನಿಧಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿವೃಷ್ಟಿ ಅನಾವೃಷ್ಟಿಯಿಂದ ರೈತ ಕಂಗಾಲಾಗಿದ್ದಾನೆ ವಿಷಾದ ವ್ಯಕ್ತಪಡಿಸಿದರು.
ಸ್ತ್ರೀ ಶಕ್ತಿ ಸಂಘಗಳ ಶ್ಲಾಘನೆ: ಇತ್ತೀಚೆಗೆ ಸ್ತ್ರೀ ಶಕ್ತಿ ಸಂಘಗಳು ಕ್ರಿಯಾಶೀಲಾವಾಗಿ ಉತ್ತಮವಾಗಿ ಕೆಲಸಮಾಡುತ್ತ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆದು ಮರು ಪಾವತಿ ಮಾಡುವಲ್ಲಿ ಉತ್ತಮ ಸಾಧನೆ ಮಾಡಿದ್ದು, ಜತೆಗೆ ವ್ಯವಸಾಯದಲ್ಲೂ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ರೈತ ಒಂದೇ ಬೆಳೆಗೆ ಅವಲಂಬಿತನಾಗಿ ಆರ್ಥಿಕವಾಗಿ ಹಿಂದುಳಿದಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.
ಅಂತರ ಬೆಳೆಯಿಂದ ರೈತ ಉತ್ತಮ ಸ್ಥಿತಿ: ಹಿಂದೆ ವ್ಯವಸಾಯ ಪದ್ಧತಿಯಲ್ಲಿ ಮಿಶ್ರತಳಿ ಅಂತರ ಬೆಳೆಯಿಂದ ರೈತ ಉತ್ತಮ ಸ್ಥಿತಿಯಲ್ಲಿ ಇದ್ದು ಜೊತೆಗೆ ಇತ್ತಿಚಿನ ದಿನಗಳಲ್ಲಿ ರಾಸಾಯನಿಕ ಪದ್ದತಿಯಲ್ಲಿ ಅವಲಂಭಿತನಾಗಿ ಹೆಚ್ಚಿನ ಇಳುವರಿ ಬೆಳೆಯುವಲ್ಲಿ ವಿಫಲರಾಗಿದ್ದಾರೆ. ಕೊಟ್ಟಿಗೆ ಗೊಬ್ಬರದಿಂದ ಬೆಳೆಗೆ ಉತ್ತಮ ಪೋಷಕಾಂಶ ದೊರೆಯುತ್ತವೆ ಎಂಬುದು ರೈತರು ನಿರ್ಲಕ್ಷಿಸಿದ್ದಾರೆ.  
ಈ ಹಿಂದೆ ಕೊಟ್ಟಿಗೆ ಗೊಬ್ಬರದಿಂದ ದ್ವಿದಳಿ ಮತ್ತು ಕಿರು ದಾನ್ಯಗಳ ಬೆಳೆಗಳು ಅಂದರೆ ಸಜ್ಜೆ, ಬಿಳಿ ಜೋಳ, ಉಚ್ಚೆಳ್ಳು ಇನ್ನಿತರೆ ಧಾನ್ಯಗಳು ಬೆಳೆಯುವಲ್ಲಿ ಮರೆತಿದ್ದಾರೆ ಎಂದರು.
ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ,ಡಾ.ಎ.ರಾಮದಾಸ್ , ಆತ್ಮಾಯೋಜನೆ ಉಪ ಯೋಜನಾ ನಿರ್ದೇಶಕಿ  ಡಾ.ಶಾಲಿನಿ, ಕಾಂಗ್ರೆಸ್ ಮುಖಂಡರಾದ ಬೊಮ್ಮಣ್ಣ ,ಹನುಮಂತರೆಡ್ಡಿ, ರೇಣುಕಮ್ಮ ಜಿಲ್ಲಾ ಆತ್ಮ ಚಾಲನ ಸಮಿತಿ ಪ್ರತಿನಿಧಿ ಎಸ್.ಎಸ್. ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement