ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಧುನಿಕ ಆಹಾರ ಪದ್ಧತಿಯ ಅನಂತ ಅಪಾಯಗಳು

Vishwanath S
Updated On : 1 Oct 2013, 1:00 am

ಚಿಂತಾಮಣಿ: ವಿದೇಶಿ ಆಹಾರ ಪದ್ಧತಿಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಹೆಚ್ಚಾಗುತ್ತಿವೆ ಎಂದು ಪ್ರಸಿದ್ಧ ಆಹಾರ ತಜ್ಞರು ಹಾಗೂ ಜನಪರ ವೈದ್ಯ, ಕೃಷಿ ವಿಜ್ಞಾನಿ ಮೈಸೂರಿನ ಡಾ.ಎ. ಖಾದರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಆಧುನಿಕ ಆಹಾರ ಪದ್ಧತಿಯ ಅನಂತ ಅಪಾಯಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಸ್ವದೇಶಿ ಆಹಾರ ಸೊಪ್ಪು, ತರಕಾರಿ, ರಾಗಿ ಸೇರಿದಂತೆ ಹಲವು ಆಹಾರ ಸೇವನೆಯಿಂದ ಉತ್ತಮ ಪೌಷ್ಠಿಕಾಂಶದೊಂದಿಗೆ ಜನರು ಆರೋಗ್ಯವಂತರಾಗಿರಲು ಸಾಧ್ಯ. ಆದರೆ ವಿದೇಶಿ ವ್ಯಾಮೋಹಕ್ಕೆ ಯುವ ಜನತೆ ಒಳಗಾಗಿ ನಮ್ಮ ಆಹಾರ ಪದ್ಧತಿಗಳನ್ನು ಮರೆತು ಪಿಜ್ಜಾ, ಕುರ್ಕುರೆ,ನೂಡಲ್ಸ್, ಚಿಪ್ಸ್, ಬರ್ಗರ್, ಪೆಪ್ಸಿ ಸೇರಿದಂತೆ ಹಲವು ಪದಾರ್ಥಗಳಿಂದ ನಾಲಿಗೆಗೆ ರುಚಿ ದೊರೆಯಬಹುದೇ ವಿನಃ ಉತ್ತಮ ಆರೋಗ್ಯ ದೊರೆಯದೆ ನಾನಾ ರೋಗಗಳಿಗೆ ಕಾರಣವಾಗುತ್ತಿದೆ ಎಂದರು.
ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕೆ.ನಾರಾಯಣಸ್ವಾಮಿ, ಮಕ್ಕಳಿಗೆಷ್ಟು ವಿಷ ತಿನ್ನಿಸುತ್ತಿದ್ದೇವೆ ಎಂಬ ಪುಸ್ತಕದ ಪರಿಚಯ ಮತ್ತು ಮಾರಾಟ ಮಾಡುವುದರ ಮುಖಾಂತರ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಉತ್ತಮ ಆರೋಗ್ಯವಂತರಾಗಲು ವಿದೇಶಿ ಆಹಾರ ಪದಾರ್ಥಗಳಿಂದ ದೂರವಿದ್ದು, ಸ್ವದೇಶಿ ಆಹಾರಗಳನ್ನು ಸೇವಿಸಿ ಆಹಾರ ಪದ್ಧತಿ ಹಾಗೂ ಸಂಸ್ಕೃತಿ ಉಳಿವುಗಾಗಿ ಪ್ರಯತ್ನಿಸಬೇಕೆಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ವಿ.ನಾರಾಯಣಸ್ವಾಮಿ ಮಾತನಾಡಿದರು.
ಜನಪದ ಕಲಾವಿದ ಜಿ.ಎಂ. ಶಿವಪ್ರಸಾದ್, ಮುನಿರೆಡ್ಡಿ ಪರಿಸರ ಹಾಡು ಹೇಳುವುದರ ಮೂಲಕ ಚೈತನ್ಯ ಮೂಡಿಸಲಾಯಿತು. ಉಪನ್ಯಾಸಕ ನರಸಿಂಹರೆಡ್ಡಿ, ವೆಂಕಟೇಶಪ್ಪ, ಶ್ರೀರಾಮರೆಡ್ಡಿ, ಸಾಹಿತ್ಯ ವೇದಿಕೆ ವೆಂಕಟರತ್ನಂ, ಲಕ್ಷ್ಮಿರೆಡ್ಡಿ, ಮಂಜುನಾಥರೆಡ್ಡಿ, ನಂಜುಂಡಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement