ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಧ್ಯಮ ವರ್ಗಕ್ಕೆ ಅನ್ನಭಾಗ್ಯ ನೀಡಲು ಒತ್ತಾಯಿಸಿ ಟಿಪ್ಪು ಸೇನೆ ಪ್ರತಿಭಟನೆ

Vishwanath S
Updated On : 1 Oct 2013, 12:58 pm

ಬಂಗಾರಪೇಟೆ: ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಕೈಗೆ ಅನ್ನ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಮೂಲಕ ಮಧ್ಯಮ ವರ್ಗದ ಜನರನ್ನು 'ಅನ್ನಭಾಗ್ಯ' ಯೋಜನೆಯಿಂದ ದೂರ ಉಳಿಯುವಂತೆ ಮಾಡಿದೆ.
 ಈ ತಾರತಮ್ಯ ಬಿಟ್ಟು ಎಲ್ಲಾ ವರ್ಗದ ಕಾರ್ಡ್‌ದಾರರಿಗೂ ಅನ್ನಭಾಗ್ಯ ಯೋಜನೆ ದಕ್ಕುವಂತೆ ಮಾಡಬೇಕೆಂದು ಒತ್ತಾಯಿಸಿ ಟಿಪ್ಪು ಸೆಕ್ಯುಲರ್
ಸೇನೆ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ಮಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 1ಕ್ಕೆ  30 ಕೆಜಿ ಬಿಪಿಎಲ್ ಕಾರ್ಡ್‌ದಾರರಿಗೆ ಕೊಡುತ್ತಿರುವುದು ಸಂತಸದ ವಿಷಯವಾಗಿದೆ ಇದರಿಂದಾಗಿ ಲಕ್ಷಾಂತರ ಬಡ ಕುಟುಂಬಗಳಿಗೆ ಅನುಕೂಲವಾಗಿದೆ.  
 ಆದರೆ ಎಪಿಎಲ್ ಕಾರ್ಡ್‌ದಾರರಿಗೆ ಈಹಿಂದೆ ಕೊಡುತ್ತಿದ್ದ ಅಕ್ಕಿಯನ್ನು ಸ್ಥಗಿತಗೊಳಿಸಿರುವುದರಿಂದ ಮಧ್ಯಮ ವರ್ಗದ ಕುಟುಂಗಳಿಗೆ ತೊಂದರೆಯಾಗಿದೆ.  
ಅಲ್ಲದೆ, ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ದಿನೇದಿನೆ ಗಗನಕ್ಕೇರುತ್ತಿರುವುದರಿಂದ ಸಾಮಾನ್ಯ ಜನರು ಬದುಕು ನೂಕುವುದು ದುಸ್ತರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆ ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.  ಟಿಎಸ್‌ಎಸ್ ಸಂಘಟನೆ ತಾಲೂಕು ಅಧ್ಯಕ್ಷ ಆಂಜುಂ ಪಾಷ, ಹುಣಸನಹಳ್ಳಿ ರಮೇಶ್, ಚಂದ್ರಶೇಖರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement