ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಷಮುಕ್ತ ಆಹಾರಕ್ಕೆ ಸಾವಯವ ಪದ್ಧತಿಯೇ ಮದ್ದು

Vishwanath S
Updated On : 1 Oct 2013, 12:57 pm

ಮಾಲೂರು: ರೈತರು ರಾಸಾಯನಿಕ ಗೊಬ್ಬರಕ್ಕಿಂತ ಕೃಷಿಯಲ್ಲಿ ಸಾವಯವ ಗೊಬ್ಬರ ಬಳಸಿ ವಿಷಮುಕ್ತ ಆಹಾರದ ಬೆಳೆಗಳನ್ನು ಬೆಳೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಸ್ವಾಮಿ ರೆಡ್ಡಿ ಕಿವಿಮಾತು ಹೇಳಿದರು.
ಅವರು ತಾಲೂಕಿನ ಗುಡ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ, ರೃತ ಸಂಪರ್ಕ ಕೇಂದ್ರ ಹಾಗೂ ದೂಡ್ಡಶಿವಾರ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರೈತ ತರಬೇತಿ ಮತ್ತು ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೈಜ್ಞಾನಿಕ ಪದ್ಧತಿ ಅಳವಡಿಕೆ ಮುಖ್ಯ: ಇಂದಿನ ವಿಷಯುಕ್ತ ರಾಸಾಯನಿಕ ಗೊಬ್ಬರದ ಬೆಳೆ ಹಾಗೂ ನಮ್ಮ ಆಹಾರ ಪದ್ದತಿಗಳಿಂದ ಜನತೆ ಕಡಿಮೆ ವಯಸ್ಸಿನಲ್ಲೇ ಮಧು ಮೇಹ ದಂತಹ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ರೈತರು ಸಾವಯವ ಗೂಬ್ಬರದ ಬಳಕೆ ಕಡೆ ಗಮನ ಹರಿಸಬೇಕು ಎಂದರು. ನಮ್ಮ ಬಯಲು ಪ್ರದೇಶದಲ್ಲಿ ನೀರಿನ ಅಭಾವ ಇರುವುದರಿಂದ ಸಿಗುವ ಅಲ್ಪ ನೀರಿನಲ್ಲೇ ಹೆಚ್ಚು ಬೆಳೆ ಬೆಳೆಯುವಂತಹ ವೈಜ್ಞಾನಿಕ ಪದ್ಧತಿಯನ್ನು ನಮ್ಮ ರೈತರು ಆಳವಡಿಸಿಕೊಳ್ಳಬೇಕು. ಇದೇ ಗ್ರಾಮದ ಪ್ರಗತಿ ಪರ ರೈತ ವೆಂಕಟೇಶ್ ಬೆಳೆದಿರುವ ಗುಣಿ ಪದ್ದತಿ ರಾಗಿ ಬೆಳೆ ಕೃಷಿ ವಿಶ್ವವಿದ್ಯಾಲಯವನ್ನೇ ಈ ಗ್ರಾಮಕ್ಕೆ ಸೆಳೆದಿರುವುದು ಶ್ಲಾಘನೀಯ ಎಂದರು. ಕೃಷಿ ವಿಶ್ವವಿದ್ಯಾಲಯ ನಮ್ಮ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಕೃಷಿ ಮಾಹಿತಿ ಚಟುವಟಿಕೆಗಳ ಪ್ರಯೋಜನವನ್ನು ಈ ಭಾಗದ ರೈತರು ಪಡೆದುಕೊಳ್ಳಬೇಕು ಎಂದರು.
ರೈತನಿಗೆ ಇನ್ನಿಲ್ಲದ ಸಂಕಷ್ಟ: ರೈತ ಸಂಘಧ ಮುಖಂಡ ಎ.ಅಶ್ವಥ ರೆಡ್ಡಿ ಮಾತನಾಡಿ, ಈ ಹಿಂದೆ ಮಳೆಯಾಶ್ರಿತದಲ್ಲಿ ಬಳೆ ಬೆಳೆಯುತ್ತಿದ್ದ ನಮ್ಮ ರೈತರು ಕೊಳವೆ ಬಾವಿ ಬಂದ ಮೇಲೆ ಹೂರ ದೇಶದಲ್ಲೇ ಬೆಳೆಯುತ್ತಿದ್ದ ವಾಣಿಜ್ಯ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಅಂತರ್ಜಲ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೌಶಲ್ಯಪೂರಿತ ನಮ್ಮ ರೈತ ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾಗಿದ್ದೇನೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ನೀಡುತ್ತಿರುವ ಮಾಹಿತಿಗಳು ನಮ್ಮ ರೈತರಿಗೆ ಸಹಕಾರಿಯಾಗಿದ್ದು, ಅವರ ಮಾರ್ಗದರ್ಶನದಂತೆ ಕೃಷಿ ಪದ್ದತಿಯನ್ನು ಬದಲಾಯಿಸಿಕೊಳ್ಳುವ ಕಡೆ ರೈತರು ಗಮನ ನೀಡಬೇಕು ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಹನುಮಂತಯ್ಯ, ಕೃಷಿ ವಿಜ್ಞಾನಿ ಡಾ.ಕೆ.ಸಿ.ಲಲಿತ, ರೈತ ಮುಖಂಡ ಗೋಪಾಲ್ ಮತ್ತಿತರರು ಮಾತನಾಡಿದರು. ಇದೇ ಸಂಧರ್ಭದಲ್ಲಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಕೃಷಿ ಅಧ್ಯಯನ ಮಾಡುತ್ತಿದ್ದ ಜಿಕೆವಿಕೆಯ 16 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಯಿತು.
ತಾಲೂಕು ಪಂಚಾಯ್ತಿ ಸದಸ್ಯ ಬಚ್ಚೇಗೌಡ ಅಧ್ಯಕ್ಷತೆ ವಹಿಸಿದ್ದರು. ರೈತ ಅರಸಪ್ಪ, ಶ್ರೀನಾಥ್, ಮರಿಸ್ವಾಮಿ, ವೆಂಕಟೇಶ್, ಕೃಷಿ ವಿಜ್ಞಾನಿಗಳಾದ ಡಾ.ನಾಗರಾಜಯ್ಯ, ಡಾ.ಶಶಿಧರ್, ಡಾ.ಮುರಳಿಮೋಹನ್, ಬೆಳಕು ಸಂಸ್ಥೆಯ ಯೋಗೇಶ್ವರ್, ಅತ್ಮಸಂಸ್ಥೆಯ ಬಾಬು, ಕೃಷಿ ವಿದ್ಯಾರ್ಥಿ ಶ್ರೀಕಾಂತ್, ಸೌಮ್ಯ ಶಿಬಿರದ ವರದಿ ಮಂಡಿಸಿದರು. ವರುಣ್ ಸ್ವಾಗತಿಸಿದರು. ಸುಷ್ಮಾ, ಶ್ವೇತಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement