ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಮಿಷ ಪ್ರಕರಣಗಳ ಹೆಚ್ಚಳ

Rashmi Kasaragodu
Updated On : 2 Apr 2014, 2:50 am

ನೋಡಲ್ ಅಧಿಕಾರಿಗಳ ಧಮ್ಕಿ ಹಾಕಿದರು
ಆರೋಪಿಗಳ ವಿರುದ್ಧ ದೂರು ದಾಖಲು



ಚಿಕ್ಕಬಳ್ಳಾಪುರ: ಬೇರೆ ಬೇರೆ ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಮತದಾರರಿಗೆ ಆಮಿಷಗಳನ್ನೊಡ್ಡಲು ಅಕ್ರಮವಾಗಿ ಬೆಲೆ ಬಾಳುವ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಿಗೆ ಪತ್ತೆಯಾಗುತ್ತಿವೆ.
ಅಕ್ರಮವಾಗಿ ಸಾಗಣೆಯಾಗುತ್ತಿರುವ ರೇಷ್ಮೆ ಸೀರೆಗಳು, ಮದ್ಯ ಮತ್ತು ಲಕ್ಷಾಂತರ ರುಪಾಯಿ ಪೊಲೀಸರಿಗೆ ಸಿಗುತ್ತಿದೆ. ತಾಲೂಕಿನ ನಂದಿ ರಸ್ತೆಯಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ರಾತ್ರಿಯಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ 2122 ಸೀರೆಗಳನ್ನು ಮತ್ತು ವಾಹನವನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಲಾಗಿದೆ. ಇನ್ನು ದಾಖಲೆ ಇಲ್ಲದೆ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಮಂಗಳವಾರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 7ರಲ್ಲಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯಿರುವ ಚದಲಪುರ ಕ್ರಾಸ್ ಬಳಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ಬೆಂಗಳೂರಿನ ಚಂದ್ರಾ ಲೇಔಟ್‌ನಿಂದ ಕಾರಿನಲ್ಲಿ 1.50 ಲಕ್ಷ ಸಾಗಿಸುತ್ತಿದ್ದರು. ಈ ಹಣವನ್ನು ಕಾರಿನ ಡಿಕ್ಕಿಯಲ್ಲಿಟ್ಟಿದ್ದು ಅಧಿಕಾರಿಗಳು ಕೇಳಿದಾಗ ಹಣಕ್ಕೆ ಸೂಕ್ತ ದಾಖಲೆಗಳನ್ನು ತೋರಿಸುವಲ್ಲಿ ಮಾಲೀಕರು ವಿಫಲರಾಗಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆಯಂತೆ ವಾಹನಗಳ ತಪಾಸಣಾ ಕಾರ್ಯ ನಿರ್ವಹಿಸುತ್ತಿದ್ದ ನೋಡಲ್ ಅಧಿಕಾರಿ ಕೃಷ್ಣಪ್ಪಗೆ ಅಂಗಿಯ ಕೊರಳಿ ಪಟ್ಟಿಯನ್ನು ಹಿಡಿದು ಪ್ರಾಣಬೆದರಿಕೆ ಹಾಕಿದ್ದಾರೆ. ನಮ್ಮ ಬಳಿ ಇರುವ ಹಣವನ್ನು ಕಿತ್ತುಕೊಂಡರೆ ಬಿಡುವುದಿಲ್ಲ. ಬೆಂಗಳೂರಿನಲ್ಲಿ ನಿಮ್ಮ ಮನೆಯಿರುವುದು ಎಲ್ಲಿ ಇದೆ ಹೇಳು? ಎಂದು ಬೆದರಿಕೆ ಹಾಕಿದ್ದಾರೆ. ಪರ್ವೀಷ್‌ಕುಮಾರ್, ನಿರ್ಮಲ್ ಮತ್ತು ರೋಹಿತ್ ಅವರನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement