ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಜಿಎಫ್‌ನಲ್ಲಿ ವಿಜೃಂಭಣೆಯ ಪ್ರತಿಷ್ಠಾಪನಾ ಮಹೋತ್ಸವ

Rashmi Kasaragodu
Updated On : 2 Apr 2014, 2:50 am

ಕನ್ನಡಪ್ರಭ ವಾರ್ತೆ, ಕೆಜಿಎಫ್, ಏ.1
ಕೆಜಿಎಫ್ ಕ್ಷೇತ್ರದ ಸುಪ್ರಸಿದ್ಧ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 27ನೇ ಪ್ರತಿಷ್ಠಾಪನಾ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಮಹೋತ್ಸವದಲ್ಲಿ ಕೇರಳದ ಹಿರಿಯ ಗುರುಸ್ವಾಮಿಗಳಾದ ವಿಷ್ಣು ಭಟ್ಟಾರಪಾಡ್ ಅವರು ಭಾಗವಹಿಸಿ, ಬೆಳಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಗಣಪತಿ ಹೋಮ, ಸುಬ್ರಮಣಿಸ್ವಾಮಿ ಹೋಮ, ನವಕಳಸ, ಅಭಿಷೇಕ, ಮಹಾಮಂಗಳಾರತಿ, ನೈವೇದ್ಯ, ಅನ್ನದಾನ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ನಗರಸಭೆ ಮಾಜಿ ಸದಸ್ಯ ವಿ.ಗೋಪಾಲ್ ಹಾಗೂ ಕುಟುಂಬದ ಪರವಾಗಿ ಭಕ್ತಾಧಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಕೇಡ ವೆಳಕ್ಕು ಅಂದರೆ ಕಲಿಯುಗ ಅಂತ್ಯವಾಗುವವರೆಗೆ ಈ ದೀಪವನ್ನು ಉರಿಸಲಾಗುತ್ತದೆ ಎಂದು ದೇವಸ್ಥಾನದ ಪ್ರಮುಖರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೆಜಿಎಫ್ ನಗರ ಪ್ರದೇಶಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿದ್ದರು. ಈ ವೇಳೆ ಕೇರಳದ ಪಂಜವಾದ್ಯಂ ತಂಡ ಹಾಗೂ ಇತರರು ಪೂಜೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ, ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಪಲ್ಲಕಿಯೊಂದಿಗೆ ಶ್ರೀ ವಿನಾಯಕ, ಶ್ರೀ ಚೋಟಾನಿಕೆರೆ ಭಗವತಿದೇವಿ ಅವರ ಅಲಂಕೃತ ರಥಗಳ ಉತ್ಸವ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಗವತಿ ಕ್ಷೇತ್ರಂನ ಶ್ರೀ ಚಂದ್ರಶೇಖರ್ ಸ್ವಾಮೀಜಿ, ಗುರುಸ್ವಾಮಿಗಳಾದ ಪುಪಕರಸ್ವಾಮಿ, ನಗರಸಭಾ ಸದಸ್ಯ ವಿಜಯಕುಮಾರ್, ಸೇರಿದಂತೆ ಕೆಜಿಎಫ್‌ನ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement