ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯುಗಾದಿಗೆ ಕಲುಷಿತ ನೀರಿನ ಕೊಡುಗೆ

Rashmi Kasaragodu
Updated On : 2 Apr 2014, 2:51 am

ಕೋಲಾರ: ನಗರದ ಜನತೆಗೆ ಇಲ್ಲಿನ ನಗರಸಭೆ ಯುಗಾದಿ ಹಬ್ಬದಂದು ಕಲುಷಿತ ನೀರನ್ನು ಬಂಪರ್ ಕೊಡುಗೆ ಕೊಟ್ಟಿದೆ
ಬಳಕೆಗೆ ಯೋಗ್ಯವಲ್ಲದ ನೀರನ್ನು ಹರಿಸಿ ಜನತೆಯ ನೆಮ್ಮದಿ ಹಾಳು ಮಾಡಿ ಹಿಡಿಶಾಪಕ್ಕೆ ಗುರಿಯಾಗಿದೆ.
ನಗರದ ಪ್ರತಿಷ್ಠಿತರ ಬಡಾವಣೆ ಎಂದೇ ಕರೆಯಲ್ಪಡುವ ಗೌರಿಪೇಟೆಯ ವಾಸಿಗಳು ಯುಗಾದಿ ಹಬ್ಬದ ಸಡರದಲ್ಲಿ ಪೂಜೆ ಮತ್ತಿತರ ಸಂಭ್ರಮದಲ್ಲಿದ್ದ ವೇಳೆ ಇದ್ದಕ್ಕಿದ್ದಂತೆ ಮನೆಯಲ್ಲಿ ಗಬ್ಬುನಾತ ಆವರಿಸಿದ್ದನ್ನು ಗಮನಿದಾಗ ಮನೆಯ ಅಂಗಳದ ಕೊಳಾಯಿಲ್ಲಿ ಕಂದು ಬಣ್ಣ ಮಿಶ್ರಿತ ಗಬ್ಬುನಾತದ ನೀರು ಬರುತ್ತಿತು.
ಕೆಲ ಸಮಯದಲ್ಲಿ ಕಪ್ಪು ಬಣ್ಣ ಮಿಶ್ರಿತ ಮೋರಿ ವಾಸನೆಯ ನೀರು ಬಂದು ಇಡೀ ವಾತಾವರಣ ಮೂಗು ಮುಚ್ಚಿಕೊಳ್ಳುವಂತಾಗಿದ್ದರಿಂದ ಮನೆಯ ಮಾಲೀಕರು ಹಬ್ಬದ ದಿನ ಹಿಂಸೆ ಪಡುವಂತಾಯಿತು.
ಗಬ್ಬುನಾತದ ನೀರನ್ನು ಬಾಟಲಿಯಲ್ಲಿ ಸಂಗ್ರಹಿಸಿದ ನಾಗರಿಕರು ಮಾಧ್ಯಮಗಳಿಗೆ ತೋರಿಸಿ ತಕ್ಷಣ ಸರಬರಾಜು ಆಗುತ್ತಿರುವ ಗಬ್ಬುನಾತದ ನೀರನ್ನು ನಿಲ್ಲಿಸುವಂತೆ ನಗರಸಭೆ ತಿಳಿಸುವಂತೆ ಕೋರಿದರು.
ಘಟನೆ ಕುರಿತಂತೆ ನಗರಸಭಾ ಸದಸ್ಯರನ್ನು ದೂರವಾಣಿಯಲ್ಲಿ ಸಂಪರ್ಕಿಸುವ ಯತ್ನ ವಿಫಲವಾಯಿತು. ಆಯುಕ್ತ ಜಗದೀಶ್‌ರನ್ನು  ದೂರವಾಣಿಯಲ್ಲಿ ಸಂಪರ್ಕಿಸಲಾಗಿ ಕೊಳಾಯಿಗಳಲ್ಲಿ ನೀರು ಹಿಡಿಯಬೇಡಿ. ಬೇಕಾದರೆ ನೀರಿನ ಟ್ಯಾಂಕರ್ ಕಳುಹಿಸಿ ಕೊಡುತ್ತೇನೆಂದು ಫೋನ್ ಕಟ್ ಮಾಡಿದರೆಂದು ನಾಗರೀಕರು ದೂರಿದ್ದಾರೆ.
ಈ ಭಾಗದಲ್ಲಿ ನೀರು ಬಿಡುವ ಸಿಬ್ಬಂದಿ ವಿಷಯ ತಿಳಿದು ಮನೆ ಮನೆಗೆ ತೆರಳಿ ನೀರನ್ನು ಸಂಗ್ರಹಿಸಬೇಡಿ ಎಂದು ತನ್ನ ಅಸಹಾಯಕತೆ ತೋಡಿಕೊಂಡ. ಇದು ಕೇವಲ ಗೌರಿಪೇಟೆಯ ಸಮಸ್ಯೆಯಲ್ಲ ಇಡೀ ಕೋಲಾರದಲ್ಲಿ ಈ ಘಟನೆ ಮರುಕಳಿಸುತ್ತಿದೆ. ನಗರಸಭೆಯಲ್ಲಿ ನೀರು ಸರಬರಾಜು ಸಿಬ್ಬಂದಿ ಕೊರತೆ ಒಂದಾದರೆ ನಗರದಲ್ಲಿ ಯಾರ ತಡೆಯೂ ಇಲ್ಲದೆ ಅಕ್ರಮ ನಲ್ಲಿ ಸಂಪರ್ಕಗಳು ರಾತ್ರೋರಾತ್ರಿ ನಡೆಯುತ್ತಿದೆ. ಈ ವೇಳೆ ಗೊತ್ತು ಗುರಿ ಇಲ್ಲದೇ ಯುಜಿಡಿ ಮತ್ತು ಮೋರಿಯ ಪೈಪ್‌ಗಗಳಿಗೆ  ಜಖಂ ಮಾಡಿ ತಮ್ಮ ನೀರಿನ ಸಂಪರ್ಕಗಳನ್ನು ಪಡೆಯುತ್ತಿರುವುದರಿಂದಲೇ ಮನೆಗಳಿಗೆ ಸರಬರಾಜು ಆಗುತ್ತಿರುವ ಕುಡಿಯುವ ನೀರಿನಲ್ಲಿ ಈ ರೀತಿಯ ಗಬ್ಬು ಮತ್ತು ಕಲುಷಿತ ನೀರು ಹರಿಯಲು ಕಾರಣವೆಂದು ಜನರು ಆರೋಪಿಸಿದ್ದಾರೆ.
ಏನೇ ಆದರೂ ಬೇಸಿಗೆಯಲ್ಲಿ ನೀರು ಸಿಗುವುದೇ ಅಭಾವ. ಈ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಅದೂ ಐದು ದಿನಗಳಿಗೊಮ್ಮೆ ನೀರು ಬಿಡುವ ನಗರಸಭೆ ತಿಂಗಳಿಗೆ ತನ್ನ ಬಾಬ್ತಿ ನೀರಿನ ಬಿಲ್ಲನ್ನು ತಪ್ಪದೇ ಸಂಗ್ರಹಿಸುತ್ತಿರುವ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಜನರಿಗೆ ಶುದ್ಧವಾದ ನೀರು ಪೂರೈಕೆಗೆ ಕ್ರಮ ಜರುಗಿಸಲಿ ಎಂಬುದು ನಾಗರೀಕರು ಒತ್ತಾಯವಾಗಿದೆ.


ವಿಷ ನೀರು ಸೇವಿಸಿ 20 ಕುರಿಗಳ ಬಲಿ
ಕೋಲಾರ: ಯೂರಿಯಾ ಮಿಶ್ರಿತ ನೀರನ್ನು ಕುಡಿದು ಸುಮಾರು 20 ಕುರಿಗಳು ಸಾವಿಗೀಡಾದ ಘಟನೆ ತಾಲೂಕಿನ ವೇಮಗಲ್ ಹೂಬಳಿಯ ಸೀತಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಮಂಜಮ್ಮ ನಾಗರಾಜುರವರಿಗೆ ಸೇರಿದ ಕುರಿಗಳು ಇವಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯಾಧಿಕಾರಿ ಮಧು, ಸಹಾಯಕ ಪಶು ಪರೀಕ್ಷಕ ಮಂಜುನಾಥ್ ಮರಣೋತ್ತರ ಪರೀಕ್ಷೆ ನಡೆಸಿದರು. ಸರ್ಕಾರ, ಪಶು ಇಲಾಖೆ ತಮಗೆ ಆಗಿರುವ ನಷ್ಟಕ್ಕೆ ಪರಿಹಾರ ದೊರಕಿಸಿಕೊಡುವಂತೆ ಮಂಜುಳ ನಾಗರಾಜು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement