ಸಾಲ: ರೈತ ನೇಣಿಗೆ ಶರಣು
ಕೋಲಾರ: ಕೊಳವೆಬಾವಿ ಕೊರೆಸಲು ಪಡೆದಿದ್ದ ಸಾಲ ಮರು ಪಾವತಿಸಲಾಗದೆ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಕಿತ್ತಂಡೂರು ಗ್ರಾಮದಲ್ಲಿ ನಡೆದಿದೆ. ರೈತ ವೆಂಕಟಪ್ಪ(41) ಮೃತರು. ಇವರು 10 ವರ್ಷಗಳ ಹಿಂದೆ ಸುಮಾರು 5 ಎಕರೆ ಪ್ರದೇಶದಲ್ಲಿ ಟೊಮೇಟೊ, ಆಲೂಗಡ್ಡೆ, ರೇಷ್ಮೆ ಬೆಳೆಯುತ್ತಿದ್ದರು.
ಆದರೆ, ಕೊಳವೆಬಾವಿಗಳು ಬತ್ತಿ ಹೋದ ಕಾರಣ ಬ್ಯಾಂಕ್ ಮತ್ತು ಖಾಸಗಿಯಾಗಿ ಪಡೆದಿದ್ದ 7 ಲಕ್ಷ ರು. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಗಾಗಿ ವೆಂಕಟಪ್ಪ ಎರಡು ಕೊಳವೆಬಾವಿ ಕೊರೆಸಿದ್ದರು. ಆದರೆ, ಎರಡೂ ಬಾವಿಗಳು ಬತ್ತಿ ಹೋಗಿದ್ದರಿಂದ ಮತ್ತೊಂದು ಕೊಳವೆಬಾವಿ ಕೊರೆಸಲು ಸಾಲ ಮಾಡಿದ್ದರು. ಇದು ಸಹ ವಿಫಲವಾದ್ದರಿಂದ ಮನನೊಂದು ಈ ಕೃತ್ಯ ಎಸಗಿಕೊಂಡಿದ್ದಾರೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.