ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಟಗಾನಹಳ್ಳಿ ರಾಮಯ್ಯ ಭಾಷಣಕ್ಕೆಅಡ್ಡಿಪಡಿಸಿದ ಗುಂಪು

Rashmi Kasaragodu
Updated On : 3 Apr 2014, 1:06 am

ಮುಳಬಾಗಲು: ನೆಲದೇವತೆಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದಾಗಿ ಕೋಲಾರ ಲೋಕಸಭೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಮಂಗಳವಾರ ರಾತ್ರಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ತಮ್ಮ ಬೆಂಬಲಿಗರೊಂದಿಗೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಅಲ್ಲಿಗೆ ಆಗಮಿಸಿದ ಗುಂಪೊಂದು ಇದಕ್ಕೆ ವಿರೋಧಿಸಿತು. ಪ್ರತಿಮೆಯ ಬಳಿ ರಾಜಕೀಯ ಬಾಷಣ ಮಾಡುವುದು ತಪ್ಪು ಎಂದು ವಾದಿಸಿದ ಗುಂಪು ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಮತ್ತು ನೀತಿ ಸಂಹಿತೆ ಜಾಗೃತ ದಳದ ಅಧಿಕಾರಿಗಳ ಮೇಲೆ ಒತ್ತಡ ತಂದಿತು.
ಅಂಬೇಡ್ಕರ್ ಪ್ರತಿಮೆ ಬಳಿ ಪೊರೆಕೆ ಹಿಡಿದು ಬರುವುದು ಸರಿಯಲ್ಲವೆಂದು ಗುಂಪು ಸಭೆಗೆ ಅಡ್ಡಿಪಡಿಸಿತು. ತಕ್ಷಣ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement