ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ಷುಲ್ಲಕ ಕಾರಣಕ್ಕೆ ಹಲ್ಲೆ; ವ್ಯಕ್ತಿ ಸಾವು

Rashmi Kasaragodu
Updated On : 3 Apr 2014, 1:10 am

ಪಾವಗಡ: ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳವಾರ ತಾಲೂಕಿನ ಉದ್ಧಘಟ್ಟೆ ಗ್ರಾಮದಲ್ಲಿ ನಡೆದಿದೆ. ವಿ.ಎಚ್. ಪಾಳ್ಯದ ಹನುಮಂತರಾಯಪ್ಪ (45) ಮೃತಪಟ್ಟವರು. ಹನುಮಂತರಾಯಪ್ಪ ಯುಗಾದಿ ಹಬ್ಬದ ಪ್ರಯುಕ್ತ ಕುಟುಂಬ ಸಮೇತ ಭಾನುವಾರ ಉದ್ದಘಟ್ಟೆ ಗ್ರಾಮಕ್ಕೆ ಆಗಮಿಸಿದ್ದು, ಮಾವ ಗಂಗಪ್ಪರ ಮನೆಯಲ್ಲಿ ಹಬ್ಬ ಪೊರೈಸಿದ ನಂತರ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ತನ್ನ ಮಗಳು ಓದುತ್ತಿಲ್ಲವೆಂದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ನಂತರ ರಸ್ತೆಯಲ್ಲಿ ಮಗಳನ್ನು ಬೈದುಕೊಂಡು ಹೋಗುತ್ತಿರುವಾಗ ಗ್ರಾಮದ ಅಕ್ಕಪಕ್ಕದಲ್ಲಿ ವಾಸವಾಗಿದ್ದ ನಾಯಕ ಸಮುದಾಯದ ಕೆಲವರು ತಮ್ಮನ್ನೇ ಬಯ್ಯುತ್ತಿರುವುದಾಗಿ ಭಾವಿಸಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ತೀವ್ರ ಥಳಿತದಿಂದ ಆಸ್ವಸ್ಥನಾದ ಹನುಮಂತರಾಯಪ್ಪನನ್ನು ಗ್ರಾಮಸ್ಥರು ತುರ್ತು ವಾಹನಕ್ಕೆ ಕರೆ ಮಾಡಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮಂಗಳವಾರ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಮೃತರ ಪತ್ನಿ ಗಂಗಮ್ಮ ಎಂಬುವರು ಘಟನೆಗೆ ಕಾರಣರಾದ ಉದ್ದಘಟ್ಟೆ ಗ್ರಾಮದ ವಿಜಯಕುಮಾರ್, ಈರಪ್ಪ, ಲೋಕೇಶ್ ಸೇರಿದಂತೆ 9ಮಂದಿ ಆರೋಪಿಗಳ ವಿರುದ್ಧ ಅರಸೀಕೆರೆ ಠಾಣೆಗೆ ದೂರು ಸಲ್ಲಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement