ಜೆಡಿಎಸ್ ಗೆದ್ದರೆ ನೆಮ್ಮದಿಯ ನಿದ್ದೆ'
ಬಂಗಾರಪೇಟೆ: ಇನ್ನು 15ದಿನಗಳ ಕಾಲ ಕಾರ್ಯಕರ್ತರು ಹಗಲು ರಾತ್ರಿ ಪಕ್ಷದ ಅಭ್ಯರ್ಥಿ ಕೆ. ಕೇಶವರ ಗೆಲುವಿಗಾಗಿ ಶ್ರಮಿಸಿದರೆ 5 ವರ್ಷ ನೆಮ್ಮದಿಯಾಗಿ ನಿದ್ದೆ ಮಾಡಬಹುದು ಎಂದು ಶಾಸಕ ಮಂಜುನಾಥಗೌಡ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಪಟ್ಟಣದ ಎಸ್.ಎನ್.ಆರ್.ಕಲ್ಯಾಣ ಮಂಟದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಈಗಾಗಲೇ ಸೋಲಿನ ಭೀತಿಯಿಂದ ಕ್ಷೇತ್ರದಿಂದ ಪಲಾಯನ ಮಾಡಿರುವಂತೆ ಕಂಡಿದ್ದಾರೆ ಎಂದರು. ಇದೇ ವೇಳೆ ಹಲವರು ಬಿಜೆಪಿ ತೊರೆದು ಜೆಡಿಎಸ್ ಸೇರಿದರು.