ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಝೆನ್ ಟೀಮ್‌ನಿಂದ ನಾಟಕ ನಾಳೆ

Rashmi Kasaragodu
Updated On : 3 Apr 2014, 1:10 am

ತುಮಕೂರು: ತುಮಕೂರಿನ ಝೆನ್‌ವತಿಯಿಂದ 4 ರ ಸಂಜೆ 6.45 ಕ್ಕೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಲೈವ್ ಥಿಯೇಟರ್ ಯೂನಿಟ್ ಅವರು ಪ್ರಸ್ತುಪಡಿಸುತ್ತಿರುವ ಕೇರಳದ ಸುಪ್ರಸಿದ್ಧ ಕಥೆಗಾರ ವೈಕಂ ಮಹಮಹ್ ಬಷೀರ್ ಅವರ ಶಬ್ದಗಳು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಝೆನ್ ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ. ನಾಟಕದ ಉದ್ಘಾಟನೆಯನ್ನು ತುಮಕೂರು ವಿವಿ ಕುಲಪತಿ ಪ್ರೊ. ರಾಜಾಸಾಬ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಥಾ ಕೀರ್ತನೆಕಾರ ಡಾ. ಲಕ್ಷ್ಮಣದಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು ಆಪಿನಕಟ್ಟೆ ಹಾಗೂ ಈ ನಾಟಕಕಾರ ಎಸ್. ಗಂಗಾಧರಯ್ಯ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಲ್ಕುರಿಕೆ ಶಿವಶಂಕರ್ ಅವರನ್ನು ಸನ್ಮಾನಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement