'ದೇಶದ ಸಮಸ್ಯೆಗಳಿಗೆ ಮೋದಿಯೇ ಪರಿಹಾರ'
ಗೌರಿಬಿದನೂರು: ದೇಶದ ಭದ್ರತೆ, ಭ್ರಷ್ಟಾಚಾರ ನಿರ್ಮೂಲನೆ, ನದಿಗಳ ಜೋಡಣೆ ಮೂಲಕ ದೇಶದ ಎಲ್ಲಾ ವರ್ಗದ ಜನರಿಗೂ ನೀರಿನ ಸಮಸ್ಯೆ ಪರಿಹರಿಸುವ ದೂರದೃಷ್ಟಿ ನಾಯಕ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಮತ ನೀಡಬೇಕೆಂದು ಮಾಜಿ ಶಾಸಕಿ ಎನ್. ಜ್ಯೋತಿರೆಡ್ಡಿ ಮನವಿ ಮಾಡಿದರು. ಪಟ್ಟಣದ ಉಪ್ಪಾರ ಕಾಲೋನಿಯಲ್ಲಿ ಬಿಜೆಪಿ ವತಿಯಂದ ಹಮ್ಮಿಕೊಂಡಿದ್ದ ಮನೆ ಮನೆ ಪ್ರಚಾರ ಹಾಗೂ ಪಾದಯಾತ್ರೆಯಲ್ಲಿ ಮಾತನಾಡಿ, ದೇಶದಲ್ಲಿ ಜ್ವಲಂತ ಸಮಸ್ಯೆಗಳು ಕಾಡುತ್ತಿದು ಕಾಂಗ್ರೆಸ್ ದುರಾಡಳಿತ, ಭ್ರಷ್ಚಾಚಾರದಿಂದ ಜನ ಬೇಸತ್ತಿದ್ದಾರೆ. ಇದರಿಂದ ಬಿಜೆಪಿಗೆ ಮತ ನೀಡಲಿದ್ದಾರೆ. ನರೇಂದ್ರಮೋದಿ ಪ್ರಧಾನಿಯಾಗಲಿದ್ದು ಅವರನ್ನು ಪ್ರಧಾನಿಮಾಡಲು ಕ್ಷೇತ್ರದ ಅಭ್ಯರ್ಥಿ ಬಚ್ಚೇಗೌಡ ಅವರಿಗೆ ಮತನೀಡಬೇಕೆಂದು ಮನವಿ ಮಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಗೋಪಿನಾಥ್, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜರೆಡ್ಡಿ, ಡಿಪಾಳ್ಯ ಶಶಿಧರ್, ನಗರ ಘಟಕದ ಅಧ್ಯಕ್ಷ ಮಾರ್ಕೆಟ್ ಮೋಹನ್ ಸೇರಿ ಹಲವರಿದ್ದರು.
ಕೋಲಾರದಲ್ಲಿ ಬಿಜೆಪಿ ಪ್ರಚಾರ
ಕನ್ನಡಪ್ರಭ ವಾರ್ತೆ, ಕೋಲಾರ,ಏ.2
ನಗರದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಪರವಾಗಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಅಭ್ಯರ್ಥಿಯ ಇಲ್ಲದಿದ್ದರೂ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಪ್ರಚಾರ ಮಾಡಿದರು, ಮುಖಂಡರಾದ ಓಂಶಕ್ತಿ ಚಲಪತಿ, ಜಗಧೀಶಾಚಾರಿ, ನೀಲಿ ಜಯಶಂಕರ್, ಕೆಂಬೋಡಿ ನಾರಾಯಣಸ್ವಾಮಿ, ಸುರೇಶ್,ಜಯಂತಿಲಾಲ್, ರಾಜೇಂದ್ರ ಮುಂತಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.