ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಿಜೆಪಿ ಬೆಂಬಲಿಸಲು ಬೆಂಬಲಿಗರ ಒತ್ತಾಯ

Rashmi Kasaragodu
Updated On : 3 Apr 2014, 1:08 am

ಮಾಲೂರು: ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಕಾಂಗ್ರೆಸ್ ಸೇರಿದ ಹಿನ್ನೆಲೆಯಲ್ಲಿ ಅವರ ಬಲಗೈ ಬಂಟ ಜಿಪಂ ಸದಸ್ಯ ರಾಮಸ್ವಾಮಿರೆಡ್ಡಿ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಕ್ಷೇತ್ರದ ಪ್ರಮುಖರ ಸಭೆ ನಡೆಸಿದರು.
ಪಟ್ಟಣದ ಶ್ರೀ ಸಾಯಿ ಕನ್ವೆನ್‌ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಾಮಸ್ವಾಮಿ ರೆಡಿಮಾತನಾಡಿದರು.
ಅರಳೇರಿ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ್, ಸದಸ್ಯ ಹುಲ್ಕೂರು ಬ್ಯಾಟಪ್ಪ, ಕಾಟೇರಿ ಸೂಣ್ಣಹಳ್ಳಿ ರಾಜಶೇಖರ್, ಕರಿನಾಯಕನಹಳ್ಳಿ ಆನಂದ್‌ರೆಡ್ಡಿ ಸೇರಿದಂತೆ ಹಲವರು ಮಾತನಾಡಿ, ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ಆದರೆ ಕಾಂಗ್ರೆಸ್‌ಗೆ ಹೋಗುವ ಇಚ್ಚೆ ವ್ಯಕ್ತ ಪಡಿಸಿದ ರಾಮಸ್ವಾಮಿರೆಡ್ಡಿ ಅವರ ಮಾತನ್ನು ಧಿಕ್ಕರಿಸಿದ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರನ್ನು ಬೆಂಬಲಿಸಬೇಕು ಎಂದು ಕೈ ಎತ್ತಿ ಬೆಂಬಲ ಸೂಚಿಸಿದರು. ಸಭೆಯಲ್ಲಿ ನೂರಕ್ಕೂ ಹೆಚ್ಚು ಕಸಬಾ ಹೋಬಳಿಯ ಪ್ರಮುಖರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement