ಮಾಲೂರಿನಲ್ಲಿ ಮತದಾನದ ಅರಿವು
ಮಾಲೂರು: ಮತದಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೂಳುವಂತೆ ಪ್ರೇರೇಪಿಸಲು ಚುನಾವಣೆ ಆಯೋಗ ಪಟ್ಟಣದ ಹಲವೆಡೆ ಬುಧವಾರ ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ಮಾತನಾಡಿ, ಮತದಾನದ ಬಗ್ಗೆ ಜನತೆ ತೋರುತ್ತಿರುವ ನಿರ್ಲಕ್ಷ್ಯ ತೊಡೆದು ಹಾಕಬೇಕಾಗಿದೆ. ಪಕ್ಷ ಹಾಗೂ ವ್ಯಕ್ತಿಗಳ ಬಗ್ಗೆ ನಂಬಿಕೆ ಇಲ್ಲದವರಿಗಾಗಿ ಈ ಬಾರಿ ನೋಟಿಬಟನ್ ವ್ಯವಸ್ಥೆ ಮಾಡಲಾಗಿದೆ ಎಂದರು. ನಂತರ ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಬಾರಿಯ ಎಲೆಕ್ಟ್ರಾನಿಕ್ ವೂಂಟಿಗ್ ಯಂತ್ರವನ್ನು ಪ್ರದರ್ಶಿಸಿ ಮತದಾನದ ಬಗ್ಗೆ ಮಾಹಿತಿ ನೀಡಲಾಯಿತು. ಚುನಾವಣೆಯ ವಿಡಿಯೋ ಕಣ್ಗಾವಲು ಅಧಿಕಾರಿ ರೇಣುಕಾ, ತಾಪಂ ಇಒ ಸಂಜೀವಯ್ಯ, ರಾಜ್ ಗೋಪಾಲ್ ಇದ್ದರು.