ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆ: ಜಮೀರ್
ಗೌರಿಬಿದನೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆ ಇದ್ದು, ಕುಮಾರಸ್ವಾಮಿರನ್ನು ಈಭಾಗದ ಜನರು ದಾಖಲೆ ಅಂತರದಿಂದ ಚುನಾಯಿಸಲಿದ್ದಾರೆಂಬ ವಿಶ್ವಾಸವನ್ನು ಶಾಸಕ ಜಮೀರ್ ಅಹ್ಮದ್ ವ್ಯಕ್ತಪಡಿಸಿದರು. ತೊಂಡೇಬಾವಿ ಸಮೀಪದ ಅಲೀಪುರದಲ್ಲಿ ಅಬ್ದುಲ್ಖಾಸಿಂ ಮತ್ತು ಅವರ ಬೆಂಬಲಿಗರನ್ನು ಜೆಡಿಎಸ್ಗೆ ಬರಮಾಡಿಕೊಂಡು ಮಾತನಾಡಿ, ಕುಮಾರಸ್ವಾಮಿಯವರು ಇಪ್ಪತ್ತು ತಿಂಗಳ ಕಾಲ ಮುಖ್ಯ ಮಂತ್ರಿಯಾಗಿ ಜನಪರ ಆಡಳಿತ ನೀಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಘೋಷಣೆ ಮಾಡಿದ್ದಾರೆ ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಎಲ್. ಶಿವ ರಾಮರೆಡ್ಡಿ, ಆರ್. ಅಶೋಕ್ ಸೇರಿ ಅನೇಕರು ಹಾಜರಿದ್ದರು.