ಸಿಪಿಎಂ ಅಭ್ಯರ್ಥಿ ರೋಡ್ ಶೋ
ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಎಂ ಪಕ್ಷದ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ಗುರುವಾರ ಬಾಗೇಪಲ್ಲಿ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ಹಾಗೂ ಬೈಕ್ ರ್ಯಾಲಿ ಮೂಲಕ ಮತ ಯಾಚನೆ ಮಾಡಿದರು.
ಪಟ್ಟಣ ಸೇರಿದಂತೆ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಅವರು ಮತಯಾಚಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಸಾವಿತ್ರಮ್ಮ, ಪುರಸಭಾ ಸದಸ್ಯರಾದ ಬಿ.ಬಿ. ಜ್ಯೋತಿ, ಓಬಳರಾಜು, ಮಹಮ್ಮದ್ ಅಕ್ರಂ, ಆರೀಫ್, ಪಿ.ವಿ. ಮಂಜುನಾಥರೆಡ್ಡಿ, ಅಂಜನೇಯರೆಡ್ಡಿ, ಚನ್ನರಾಯಪ್ಪ, ಜಿ. ಕೃಷ್ಣಪ್ಪ, ರಾಮಲಿಂಗಪ್ಪ, ಹೇಮಚಂದ್ರ ಇದ್ದರು.