4 ಲೋಡ್ ಹುಲ್ಲು ಬೆಂಕಿಗೆ ಆಹುತಿ
ಚಿಂತಾಮಣಿ: ಕ್ಷುಲ್ಲಕ ಕಾರಣಕ್ಕಾಗಿ ಸುಮಾರು 4 ಲೋಡ್ನಷ್ಟು ಹುಲ್ಲು ಮೇದೆಗೆ ಬೆಂಕಿ ಹಾಕಿದ ಘಟನೆ ತಾಲೂಕಿನ ಮುಂತಕದಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ರೈತ ಎಂ.ರವಿ, ಬಿ.ಎನ್.ಮುನಿಸ್ವಾಮಿ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ
ಶ್ರೀರಾಮ ಹಾಗೂ ಇತರರು ಸೇರಿದ ಗುರುವಾರ ರಾತ್ರಿ 12.30ಕ್ಕೆ ಸುಮಾರು 25 ಸಾವಿರ ಬೆಲೆಯ ಹುಲ್ಲಿನ ಮೇದೆಗೆ ಬೆಂಕಿ ಇಟ್ಟಿದ್ದಾರೆ. ಈ ಘಟನೆಗೆ ಹಳೇ ವೈಷಮ್ಯವೇ ಎಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಬೆಂಕಿ ಬಿದ್ದಿದ್ದು ಗೊತ್ತಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಆರೋಪಿಗಳ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ತಾಯಂದಿರ ಕ್ರೀಡಾ ಸ್ಪರ್ಧೆಗಳು
ಟೇಕಲ್: ಪೋಷಕರು ವಿದ್ಯಾರ್ಥಿಗಳ ಬಾಂಧವ್ಯಕ್ಕೆ ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎ.ಕೆ. ವೆಂಕಟೇಶ್ ತಿಳಿಸಿದರು.
ಟೇಕಲ್ ಬಾಬಾ ವಿದ್ಯಾಲಯದಲ್ಲಿ ತಾಯಂದಿರ ಕ್ರೀಡಾ ಸ್ಪರ್ಧೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂದೆ-ತಾಯಿಯರಿಗೆ, ವಿದ್ಯಾರ್ಥಿಗಳಿಗೆ ಪಾಠದ ಮಧ್ಯೆ ಇಂತಹ ಚಟುವಟಿಕೆಗಳಿಂದ ಮಾನಸಿಕ ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ತಾಯಂದಿರ ಕ್ರೀಡಾ ಸ್ಪರ್ಧೆಯಲ್ಲಿ ಬಾಬಾ ವಿದ್ಯಾಲಯದ ಪೋಷಕರು ಪಾಲ್ಗೊಂಡಿದ್ದು, ಕಾರ್ಯಕ್ರಮವನ್ನು ಮಕ್ಕಳ ತಾಯಂದಿರು ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ಬೆಲೂನ್ ಆಟ, ಗುಂಡು ಎಸೆತ, ಮ್ಯೂಸಿಕಲ್ ಚೇರ್ ಮುಂತಾದ ಆಟಗಳಲ್ಲಿ ತಾಯಂದಿರು ಭಾಗವಹಿಸಿದ್ದರು. ಸಂಸ್ಥೆಯ ವಿ. ಅವಿನಾಶ್, ಸಂಪತ್ ಕುಮಾರ್, ಎಸ್. ಹರೀಶ್, ಮುಖ್ಯ ಶಿಕ್ಷಕಿ ಎಂ.ವಿ. ಸವಿತಾ, ಶ್ವೇತಾ, ಯೋಗಿಶ್ವರಬಾಯ್, ರಾಧಿಕಾ, ಮಮತಾ ಹಾಗೂ ರಾಜ್ಯ ಪ್ರಶಸ್ತಿ ವಿಜೇತೆ ಶಿಕ್ಷಕಿ ಡಿ.ಎಸ್. ರತ್ನಮ್ಮ ಪಾಲ್ಗೊಂಡಿದ್ದರು.