ಆಭರಣ ಕದ್ದ ಕೆಲವೇ ಕ್ಷಣದಲ್ಲಿ ಆರೋಪಿ ಬಂಧನ
ಶಿಡ್ಲಘಟ್ಟ: ಪಟ್ಟಣದ ಟಿ.ಬಿ. ರಸ್ತೆಯಲ್ಲಿರುವ ಒಡವೆ ಅಂಗಡಿಗೆ ವ್ಯಾಪಾರಕ್ಕೆಂದು ಬಂದು ಒಡವೆ ಕದ್ದು ಪರಾರಿಯಾದ ಪ್ರಕರಣ ನಡೆದಿದೆ.
ಬಾಲ ವೆಂಕಟರಾವ್ ಅವರ ರೂಪ ಜ್ಯೂವೆಲರ್ಸ್ನಲ್ಲಿ ಅಪರಿಚಿತ 4 ಮಂದಿ ಹೆಂಗಸರು, ಒಬ್ಬ ಗಂಡಸು ವ್ಯಾಪಾರಕ್ಕೆಂದು ಬಂದು 2 ಉಂಗುರ, 2 ಜೊತೆ ಓಲೆ ಕದ್ದು ಪರಾರಿಯಾಗಿದ್ದು, ಸುಮಾರು 12 ಗ್ರಾಂ ತೂಕದ ಸುಮಾರು ರು. 24,000 ಬೆಲೆ ಬಾಳಬಹುದೆಂದು ಅಂದಾಜಿಸಲಾಗಿದ್ದು, ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಬೇಧಿಸಲು ಶಿಡ್ಲಘಟ್ಟ ಅಪರಾದ ವಿಭಾಗದ ಕೃಷ್ಣಪ್ಪ, ಸಿಬ್ಬಂದಿ ರಮೇಶ್, ಮಂಜುನಾಥಗುಪ್ತರನ್ನು ನೇಮಿಸಿದ್ದು, ವಿಜಯಪುರದಲ್ಲಿ 4 ಮಂದಿ ಹೆಂಗಸರನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಉಂಗುರ ಪತ್ತೆಯಾಗಿದೆ. ಜೊತೆಯಲ್ಲಿದ್ದ ಗಂಡಸು 2 ಜೊತೆ ಓಲೆ ಜೊತೆ ಪರಾರಿಯಾಗಿರಬಹುದೆಂದು ಊಹಿಸಲಾಗಿದೆ. ಕಮಲಮ್ಮ, ಸುಬ್ಬಮ್ಮ, ರಾಮನಗರದ ಮಂಚನ ಬೆಲೆಗೆ ಸೇರಿದವರಾಗಿದ್ದು, ಸರೋಜಮ್ಮ, ಲಕ್ಷೀ ಚಿತ್ರ ದುರ್ಗದ ಎಂಡ್ರಹಳ್ಳಿಗೆ ಸೇರಿದವರಾಗಿದ್ದಾರೆ. ಘಟನೆ ನಡೆದ ಕೆಲವೇ ಸಮಯದಲ್ಲಿ ಅಪರಾಧಿಗಳನ್ನು ಬಂಧಿಸಿದರುವುದು ವಿಶೇಷವಾಗಿದ್ದು, ಪರಾರಿಯಾಗಿರುವ ಗಂಡಸಿನ ಶೋಧನೆಯಲ್ಲಿ ಪೊಲೀಸರು ತೊಡಗಿದ್ದಾರೆ.
ಹಾಕಿ ಉಚಿತ ತರಬೇತಿ ಶಿಬಿರ
ಚಿಕ್ಕಬಳ್ಳಾಪುರ: ಶಾಲಾ ಮತ್ತು ಕಾಲೇಜು ಮಕ್ಕಳಿಗಾಗಿ ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಏ.10 ರಿಂದ 15 ರವರೆಗೆ ಉಚಿತ ಹಾಕಿ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರ ಪ್ರತಿದಿನ ಬೆಳಿಗ್ಗೆ 6.30 ರಿಂದ 8.30 ಮತ್ತು ಸಂಜೆ 4.30 ರಿಂದ 6.30 ವರೆಗೆ ನಡೆಯಲಿದ್ದು ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಸರ್.ಎಂ.ವಿ.ಜಿಲ್ಲಾ ಕ್ರೀಡಾಂಗಣ ವಿಳಾಸವನ್ನು ಸಂಪರ್ಕಿಸಿ.
ವಿಶ್ವ ಆರೋಗ್ಯ ದಿನಾಚರಣೆ 7 ಕ್ಕೆ
ಚಿಕ್ಕಬಳ್ಳಾಪುರ: ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಏ.7 ರಂದು ಬೆಳಗ್ಗೆ 11 ಗಂಟೆಗೆ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಸ್ವಯಂ ಸೇವಾ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಜಿಪಂ ಸಿಇಒ ನೀಲಾ ಮಂಜುನಾಥ್ ವಹಿಸಲಿದ್ದಾರೆ. ಡಾ. ಮಂಜುಳ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಎನ್. ಕವನ ಸೇರಿ ಅನೇಕರು ಭಾಗವಹಿಸಲಿದ್ದಾರೆ. ಪ್ರೊ. ಕೋಡಿರಂಗಪ್ಪ ಉಪನ್ಯಾಸ ನೀಡಲಿದ್ದಾರೆ.