ಬಿಜೆಪಿ ಮುಖಂಡರು ಜೆಡಿಎಸ್ಗೆ
ಗೌರಿಬಿದನೂರು: ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿಯ ಬಿಜೆಪಿ ಮುಖಂಡರಾದ ಎಂ. ಆದಿಮೂರ್ತಿ, ರಾಮಾಂಜಿ, ಗಂಗಾಧರಪ್ಪ, ನರಸಿಂಹಗೌಡ, ಆದಿನಾರಾಯಣ, ಹನುಮಂತರಾಯಪ್ಪ, ಚಿಕ್ಕಕದಿರಪ್ಪ, ಅವರು ಜೆಡಿಎಸ್ ವರಿಷ್ಠರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಶುಕ್ರವಾರ ಜೆಡಿಎಸ್ ಸೇರಿದ್ದಾರೆ.
ಗೌರಿಬಿದನೂರು ಪಟ್ಟಣದ ಪುರಸಭಾ ಮಾಜಿ ಸದಸ್ಯ ವಾಸು, ನಗರಗೆರೆ ಹೋಬಳಿಯ ಚೋಳಶೆಟ್ಟಿ ಹಳ್ಳಿಯ ಅಶ್ವತ್ಚಂದ್ರಪ್ಪ ಆದಿನಾರಾಯಣಪ್ಪ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಮುಖಂಡರಾದ ಆರ್. ಅಶೋಕ್ಕುಮಾರ್, ಎಸ್.ಹಚ್. ಲಕ್ಷ್ಮೀನಾರಾಯಣ, ಪುರಸಭಾ ಸದಸ್ಯ ಅನಂತರಾಜ್, ವಕ್ತಾರ ಹೊಸೂರು ಹರಿ, ವಿವೇಕಾನಂದರೆಡ್ಡಿ, ವೆಂಕಟರಮಣಪ್ಪ, ಅನ್ವರ್ಸಾಬ್ ಮುಂತಾದವರು ಪಕ್ಷಕ್ಕೆ ಸ್ವಾಗತಿಸಿದರು.