ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬ್ಯಾಂಕುಗಳ ವಿರುದ್ಧ ರೈತ ಸಂಘ ಪ್ರತಿಭಟನೆ

Rashmi Kasaragodu
Updated On : 5 Apr 2014, 2:25 am

ಕೋಲಾರ: ಸಾಲ ವಸೂಲಿ ನೆಪದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರ ಬ್ಯಾಂಕುಗಳು ರೈತರಿಗೆ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ರೈತ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿತು. ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ಮಾತನಾಡಿ, ತೀವ್ರ ಬರಗಾಲಕ್ಕೆ ಜಿಲ್ಲೆ ತುತ್ತಾಗಿ ಸರ್ಕಾರ ಜಿಲ್ಲೆಯನ್ನು ಬರಗಾಲಪೀಡಿತ ಜಿಲ್ಲೆಯೆಂದು ಘೋಷಿಸಿದ್ದರೂ ಬ್ಯಾಂಕಿನ ಅಧಿಕಾರಿಗಳು ರೈತರ ಸಾಲ ವಸೂಲಿಯನ್ನು ಬಲವಂತವಾಗಿ ಮಾಡುತ್ತಿವೆ, ಕರಪತ್ರ ಮುದ್ರಿಸಿ ಸಾಲಗಾರರ ಪೋಟೋವನ್ನು ಬ್ಯಾಂಕ್ ಮುಂದೆ ಪ್ರಕಟಿಸಿ ಕಿರುಕುಳ ನೀಡುತ್ತಿವೆ ಎಂದು ದೂರಿದರು.
ಲಾರಿ ಕಳವು: ವ್ಯಕ್ತಿ ಕೊಲೆ
ಮುಳಬಾಗಲು: ಲಾರಿ ಕಳವು ಮಾಡಿದರೆಂಬ ಕಾರಣಕ್ಕಾಗಿ ಸಂಬಂಧಿಕರೇ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ. ಗ್ರಾಮದ ವಾಸಿ ನಾಗರಾಜ್ ಕೊಲೆಯಾದ ವ್ಯಕ್ತಿ. ಮದ್ಯ ವ್ಯಸನಿಯಾದ ಆತ ಉಮೇಶ ಎಂಬುವರ ಲಾರಿಯನ್ನು ಏ.1ರಂದು ಕಳವು ಮಾಡಿದ್ದರು. ಲಾರಿ ಮರು ದಿವಸ ಪತ್ತೆಯಾಗಿದ್ದು, ಗುರುವಾರ ಸಂಜೆ ಉಮೇಶ್ ಮತ್ತು ಅವನ ಸಂಬಂಧಿ ಆನಂದ ಎಂಬುವರು ನಾಗರಾಜ್ ಮೇಲೆ ಹಲ್ಲೆ ನಡೆಸಿದ ಕಾರಣ ತೀವ್ರವಾಗಿ ಅಸ್ವಸ್ಥಗೊಂಡ ನಾಗರಾಜ್ ರಾತ್ರಿ ವೇಳೆಯಲ್ಲಿ ಮೃತಪಟ್ಟಿದ್ದು, ನಂಗಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement