ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಹಿತೆ ಉಲ್ಲಂಘನೆ 18 ಕೇಸ್; 6ಕ್ಕೆ ಎಫ್ಐಆರ್

Rashmi Kasaragodu
Updated On : 5 Apr 2014, 2:22 am

ಕೋಲಾರ, ಏ.4
ಲೋಕಸಭಾ ಚುನಾವಣೆಯ ಪ್ರಕ್ರಿಯೆ ಆರಂಭಗೊಂಡ ಮೇಲೆ ಕೋಲಾರ ಕ್ಷೇತ್ರದಲ್ಲಿ ಒಟ್ಟು 18 ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳಾಗಿದ್ದು, ಈ ಪೈಕಿ 6  ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದರು.
ನಗರದ ವಾರ್ತಾ ಇಲಾಖೆಯ ಕಚೇರಿಯಲ್ಲಿ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '18 ಪ್ರಕರಣಗಳಲ್ಲಿ 12 ಪ್ರಕರಣಗಳು ಕ್ರಿಮಿನಲ್ ಅಲ್ಲವೆಂಬ ಕಾರಣಕ್ಕೆ ಇತ್ಯರ್ಥಗೊಳಿಸಲಾಗಿದೆ' ಎಂದರು.
ನಗರದ ಗೋಕುಲ್ ಕಾಲೇಜು ಬಳಿ ಕಾಂಗ್ರೆಸ್ ವತಿಯಿಂದ ಔತಣಕೂಟ ನಡೆದಿರುವ ಬಗ್ಗೆ ಪತ್ರಿಕಾ ವರದಿ ಗಮನಿಸಿ ಸೆಕ್ಟರ್ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಶಿಢ್ಲಘಟ್ಟದಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ಕೊಳವೆ ಬಾವಿ ಕೊರೆಸುತ್ತಿರುವ ದೂರು ಬಂದ ಹಿನ್ನಲೆಯಲ್ಲಿ ಪರಿಶೀಲಿಸಲಾಗಿದೆ. ಅದು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕುಡಿಯುವ ನೀರಿಗಾಗಿ ಕೊರೆಸುತ್ತಿರುವ ಕೊಳವೆ ಬಾವಿ ಎಂದು ತಿಳಿಸಿದರು. ಮಾ.18ರಂದು ಜೆಡಿಎಸ್ವತಿಯಿಂದ ಸನ್ಯಾಸಪಲ್ಲಿಯಲ್ಲಿ ತಮಟೆಗಳನ್ನು ವಿತರಿಸಿದ್ದು, ಈ ಸಂಬಂಧ 5 ಸಾವಿರ ಮೌಲ್ಯದ ತಮಟೆಗಳನ್ನು ವಶಪಡಿಸಿಕೊಂಡು, ಎಫ್ಐಆರ್ ದಾಖಲಿಸಲಾಗಿದೆ. ಮಾ.19ರಂದು ಕೋಲಾರ ನಗರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸೇರಿದ 1.40 ಲಕ್ಷ ಮೌಲ್ಯದ ಟಿ-ಷರ್ಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಗಾರಪೇಟೆ ಕೋದಂಡರಾಮಸ್ವಾಮಿ ದೇಗುಲದ ಬಳಿ ನರೇಂದ್ರ ಮೋದಿ ಅವರ ಭಾಷಣದ ನೇರಪ್ರಸಾರವನ್ನು ಅನುಮತಿಯಿಲ್ಲದೇ ಬಿತ್ತರಿಸುತ್ತಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement