ಹಳಿ ತಪ್ಪಿದ ಗೂಡ್ಸ್ ರೈಲು
ಬಂಗಾರಪೇಟೆ: ತಮಿಳುನಾಡಿನ ಜೋಲಾರಪೇಟೆ ಬಳಿ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಚೆನ್ನೈ- ಬೆಂಗಳೂರು ಮಾರ್ಗದಲ್ಲಿ ಶುಕ್ರವಾರ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಬರುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿತು. ಇದರಿಂದ ಅನಾಹುತ ಸಂಭವಿಸದಿದ್ದರೂ ಈ ಮಾರ್ಗದಲ್ಲಿ ಸಂಚರಿಸುವ ಕಾಕಿನಾಡ ಎಕ್ಸ್ಪ್ರೆಸ್, ಬೃಂದಾವನ ಎಕ್ಸ್ಪ್ರೆಸ್, ಡಬಲ್ ಡೆಕ್ಕರ್ ಸೇರಿದಂತೆ ಇತರೆ ರೈಲುಗಳು ಸಮಯಕ್ಕೆ ಸರಿಯಾಗಿ ಆಗಮಿಸಲು ಸಾಧ್ಯವಾಗಲಿಲ್ಲ.
ಹಾಗಾಗಿ, ಪ್ರಯಾಣಿಕರು ನಿಲ್ದಾಣದಲ್ಲಿ ಮೂರ್ನಾಲ್ಕು ಗಂಟೆಯವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಕೆಲವರು ಬಸ್ಗಳಲ್ಲೇ ಪ್ರಯಾಣ ಮುಂದುವರಿಸಿದರು.ಮಧ್ಯಾಹ್ನದ ಬಳಿಕ ಗೂಡ್ಸ್ ರೈಲನ್ನು ಹಳಿಗಳಿಂದ ತೆರವುಗೊಳಿಸಲಾಯಿತು.