ಅಭಿವೃದ್ಧಿ ಗುರ್ತಿಸಿ ಕಾಂಗ್ರೆಸ್ಗೆ ಮತ ಹಾಕಿ
ಕಾಂಗ್ರೆಸ್ ಪ್ರಚಾರದಲ್ಲಿ ಶಾಸಕ ನಾರಾಯಣಸ್ವಾಮಿ ಹೇಳಿಕೆ
ಬಂಗಾರಪೇಟೆ: ಕಳೆದ ಹತ್ತು ತಿಂಗಳಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗುರುತಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಬಂಗಾರಪೇಟೆ ತಾಲೂಕಲ್ಲಿ ಪ್ರಚಾರ ನಡೆಸಿದ ಅವರು, ಐದು ವರ್ಷಗಳ ಕಾಲ ಶಾಸಕರಾಗಿರಲಿ ಎಂದು ಮತದಾರರು ಎಂ.ನಾರಾಯಣಸ್ವಾಮಿಯನ್ನು ಆಯ್ಕೆ ಮಾಡಿದ್ದರು. ಆದರೆ, ಅವರು ಆ ಮತಗಳನ್ನು ಬಿಜೆಪಿಯವರಿಗೆ ಮಾರಿಕೊಂಡು ಮತದಾರರಿಗೆ ವಂಚಿಸಿದರು. ಈಗ ಸಾಲದು ಎಂಬಂತೆ ಲೋಕಸಭೆಗ ಸ್ವರ್ದಿಸಿದ್ದಾರೆ. ಇಲ್ಲಿ ಗೆದ್ದರೆ ಮತ್ತೊಬ್ಬರಿಗೆ ಸಂಸದ ಸ್ಥಾನವನ್ನು ಮಾರಿಕೊಳ್ಳುವುದಿಲ್ಲ ಎಂಬುದಕ್ಕೆ ಖಾತರಿಯಿಲ್ಲ ಎಂದು ಆರೋಪಿಸಿದರು.
ಕೆ.ಹೆಚ್.ಮುನಿಯಪ್ಪ ಅಭಿವೃದ್ದಿ ಹರಿಕಾರರಾಗಿದ್ದು ಇವರು 7ನೇಬಾರಿ ಸಂಸದರಾದರೆ ಕೋಲಾರ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು. ಶಾಸಕರೊಂದಿಗೆ ಮುಖಂಡರಾದ ಕೆ.ಚಂದ್ರಾರೆಡ್ಡಿ, ಬ್ಲಾಕ್ ಅಧ್ಯಕ್ಷ ಮಂಜುನಾಥ, ವೆಂಕಟರಾಮರೆಡ್ಡಿ, ಎಂ.ಗೋಪಿನಾಥ್, ಪಿಚ್ಚಹಳ್ಳಿ ಗೋವಿಂದರಾಜು, ಜಯಣ್ಣ, ಅನಂತನಾಗ್ ಮತ್ತಿತರರು ಇದ್ದರು.