ಇಂದು ಶ್ರೀಬಸವೇಶ್ವರಸ್ವಾಮಿ ಮಹೋತ್ಸವ
ಕೆಜಿಎಫ್: ರಾಬರ್ಟ್ಸನ್ಪೇಟೆಯ ಸ್ವರ್ಣಕುಪ್ಪಂನಲ್ಲಿನ ಶ್ರೀ ಮಹಾಲಕ್ಷ್ಮೀ ಸತ್ಯನಾರಾಯಣಸ್ವಾಮಿ ಸಮೇತ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ 34ನೇ ವರ್ಷದ ಶ್ರೀರಾಮನವಮಿ ಮಹೋತ್ಸವಗಳ ಪ್ರಯುಕ್ತ ಶ್ರೀ ಬಸವ ಸೇವಾ ಸಮಿತಿಯಿಂದ ಎಂಟನೇ ವರ್ಷದ ಶ್ರೀ ಬಸವೇಶ್ವರಸ್ವಾಮಿ ಮಹೋತ್ಸವ ಏ.6ರಂದು ಭಾನುವಾರ ಸಂಜೆ 6 ಗಂಟೆಗೆ ನಡೆಯಲಿದೆ. ಏ.6ರಂದು ಯೋಗಿ ಆಂಜನೇಯಸ್ವಾಮಿ ಉತ್ಸವ ಹಾಗೂ ಶ್ರೀ ಬಸವೇಶ್ವರಸ್ವಾಮಿ ಸೇವಾ ಸಮಿತಿಯಿಂದ ವಿಶ್ವಗುರು ಶ್ರೀ ಬಸವಣ್ಣನ ಉತ್ಸವದಲ್ಲಿ ಅಂದ್ರಹಳ್ಳಿ ರುದ್ರೇಶ್ ಹಾಗೂ ಮಂಜುನಾಥ್ ತಂಡದಿಂದ ಆಕರ್ಷಕ ವೀರಗಾಸೆ ಕುಣಿತ, ಪಲ್ಲಕಿ ಉತ್ಸವದ ಮೆರವಣಿಗೆಯನ್ನು ನಡೆಸಿ ರಾತ್ರಿ 9 ಗಂಟೆಗೆ ಸ್ವರ್ಣಕುಪ್ಪಂ ಡಾ.ರಾಜ್ಕುಮಾರ್ ವೃತ್ತದಲ್ಲಿ ಅಗ್ನಿಕುಂಡ ಮಹೋತ್ಸವದ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಬಸವ ಸೇವಾ ಸಮಿತಿ ತಿಳಿಸಿದೆ.
ಮಹಿಳೆಯರನ್ನು ಗೌರವಿಸಬೇಕು: ನ್ಯಾ.ಪ್ರೇಮಾವತಿ
ಕೋಲಾರ: ಮಹಿಳೆಯರನ್ನು ಗೌರವಯುತವಾಗಿ ಕಾಣುವ ಬದ್ಧತೆ ಇರಬೇಕು. ಹೆಣ್ಣು ಭೋಗದ ವಸ್ತುವಲ್ಲ. ಸಮಾನತೆ ಸಮಭಾವ ಹೊಂದಬೇಕು ಎಂದು ಕೋಲಾರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶೆ, ಕೌಟುಂಬಿಕ ನ್ಯಾಯಾಲಯ ಮನಗೊಳಿ ಪ್ರೇಮಾವತಿ ಅವರು ತಿಳಿಸಿದರು. ವೃತ್ತಿ ಕೌಶಲ್ಯ ತರಬೇತಿ ಕಾಲೇಜು, ಮಾನವ ಸಂನ್ಮೂಲ ಅಭಿವೃದ್ಧಿ ಕೇಂದ್ರ, ಕೋಲಾರ ವತಿಯಿಂದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕೌಶಲ್ಯ ತರಬೇತಿ ಮುಗಿಸಿ ಸ್ವ ಉದ್ದಿಮೆದಾರರಾದ ಮಹಿಳೆಯರಿಗೆ ಸನ್ಮಾನ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಕೆ.ಪ್ರಸನ್ನಕುಮಾರಿ, ವೃತ್ತಿ ಕೌಶಲ್ಯ ತರಬೇತಿ ಕಾಲೇಜಿನ ನಿರ್ದೇಶಕ ಎಂ.ವಿ.ನಾರಾಯಣಸ್ವಾಮಿ ಅವರು ಮಾತನಾಡಿದರು.