ಉತ್ತಮ ರಾಜಕಾರಣಿಗಳಾಗಲು ಪಣ ತೊಡಿ: ಡಿಸಿ ರವಿ
ಕೋಲಾರ: ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಎಂಜನಿಯರಿಂಗ್ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಹೋಗಿ ದೊಡ್ಡ ಸಾಧನೆ ಮಾಡುವುದರ ಜೊತೆಗೆ ಉತ್ತಮ ರಾಜಕಾರಣಿಗಳಾಗಲು ಪಣತೊಡಬೇಕು ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಸಲಹೆ ನೀಡಿದರು. ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ತಾಯಿಯೇ ಮೊದಲ ಗುರು. ಸಮಾಜಕ್ಕೆ ಹೆಣ್ಣಿಂದಲೇ ಮೊದಲ ರಾಜಕೀಯ ಪಾಠ. ಸಂವಿಧಾನದ ತಳಹದಿ ಬಲಗೊಳ್ಳಳು ಹೆಣ್ಣು ಮಕ್ಕಳ ಜವಾಬ್ದಾರಿ ತುಂಬಾ ಇದೆ' ಎಂದರು. ಏ.17ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ಪ್ರತಿ ವಿದ್ಯಾರ್ಥಿನಿ ಮತದಾನ ಮಾಡಿಬೇಕು. ಅಲ್ಲದೆ, ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಸಾಹಿತಿ ಮತ್ತು ವಿಮರ್ಶಿಕಿ ಡಾ.ಸುಮಿತ್ರಾಬಾಯಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಆಂಜಿನಪ್ಪ ವಹಿಸಿದ್ದರು. ಬಹುಮಾನ ವಿತರಣೆ: ಇದೇ ಸಂದರ್ಭದಲ್ಲಿ ಕ್ರೀಡಾ, ಸಾಂಸ್ಕೃತಿಕ ಮತ್ತಿತರ ಸ್ಪರ್ಧೆಗಳಲ್ಲಿ ಸಾಧನೆ ತೋರಿದ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿಜಯಕುಮಾರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಎಂ.ರೆಡ್ಡಪ್ಪ ಇದ್ದರು. ಸಹಾಯಕ ಪ್ರಾಧ್ಯಾಪಕಿ ಹೇಮಾಲಿನಿ ನಿರೂಪಿಸಿ, ಸಹ ಪ್ರಾಧ್ಯಾಪಕ ಎಂ.ಮುನಿರತ್ನಪ್ಪ ಸ್ವಾಗತಿಸಿದರು.