ಕೋಲಾರ ನಗರದ ವಿವಿಧೆಡೆ ಬಾಬು ಜಗಜೀವನರಾಂ ಜಯಂತಿ
ಕೋಲಾರ: ಮಾಜಿ ಉಪ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿ, ಇಡೀ ದೇಶಕ್ಕೆ ಹಸಿರು ಕ್ರಾಂತಿಯನ್ನು ಪಸರಿಸಿದ ಬಾಬು ಜಗಜೀವನರಾಂ ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಡಾ.ಎಂ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಶನಿವಾರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ ಅವರ 107ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಸಾಮಾನ್ಯ ದಲಿತ ಕುಟುಂಬದಲ್ಲಿ ಹುಟ್ಟಿದ ಬಾಬು ಜಗಜೀವನರಾಂ ಇಡೀ ವಿಶ್ವ ಮೆಚ್ಚುವಂಥ ಕೆಲಸ ಮಾಡಿದ್ದಾರೆ' ಎಂದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್.ಲಕ್ಷ್ಮೀನಾರಾಯಣರೆಡ್ಡಿ, ಸರಳಾವತಿ ಚಂದ್ರಶೇಖರ್, ಸಿದ್ಧಾರ್ಥ ಪಾಲಿಟೆಕ್ನಿಕ್ನ ದಯಾನಂದ, ಕಲ್ಲಂಡೂರು ನಾಗರಾಜ್, ಆಂಜನಪ್ಪ ಮತ್ತಿತರರು ಇದ್ದರು. ಮಾಗೇರಿ ವೆಂಕಟೇಶ್ ನಿರೂಪಿಸಿ ವಂದಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸ್ಮರಣೆ
ಡಾ.ಬಾಬು ಜಗಜೀವನರಾಂ ಅವರ ಹುಟ್ಟು ಹಬ್ಬವನ್ನು ಕೋಲಾರ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸರಳವಾಗಿ ಆಚರಿಸಲಾಯಿತು. ಬಾಬು ಜಗಜೀವನರಾಂ ಅ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರು ಹೂಮಾಲೆ ಹಾಕಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖಂಡಕಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಅಧಿನಾರಾಯಣ, ಕೆ.ಜಯದೇವ್, ಬುಸನಹಳ್ಳಿ ಆಂಜಿನಪ್ಪ, ಗೌರಿ, ಗೋಪಾಲ್, ರವಿ, ಗೋವಿಂದರಾಜು, ಮುನಿವೆಂಕಟ, ಸೋಮು, ಚಿನ್ನಪ್ಪ, ಚಿನ್ನಿ, ನಾರಾಯಣಸ್ವಾಮಿ, ದೇವರಾಜ್, ರಾಜೇಶ್ ಸಿಂಗ್ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ಭವನ ನಿರ್ಮಾಣಕ್ಕೆ ಒತ್ತಾಯ
ಡಾ.ಬಾಬು ಜಗಜೀವನರಾಂ ಭವನವನ್ನು ಕೋಲಾರದಲ್ಲಿ ನಿರ್ಮಿಸಲು ಈ ಹಿಂದಿನ ಸರ್ಕಾರ 2 ಕೋಟಿ ನೀಡಿದ್ದು, ಲೋಕಸಭಾ ಚುನಾವಣೆಯ ನಂತರ ಯೋಜನೆ ಜಾರಿಗೆ ತರಬೇಕೆಂದು ಕೋಲಾರ ಜಿಲ್ಲೆಯ ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ. ಕಾರ್ಯಕ್ರಮದಲ್ಲಿ ಹಾರೋಹಳ್ಳಿ ವೆಂಕಟೇಶ್, ಸಾಹುಕಾರ್ ಶಂಕರಪ್ಪ, ಪೂವಂಡಹಳ್ಳಿ ವೆಂಕಟರಾಮ್, ಧಂಜಯ, ನರೇಂದ್ರಬಾಬು.ಪಿ, ಮುರಳಿ, ವಿಜಯ್, ರಾಜು, ನರಸಿಂಹ, ನಾರಾಯಣಸ್ವಾಮಿ ಇದ್ದರು.