ಚುನಾವಣಾ ಸಿಬ್ಬಂದಿಗೆ ಬಸ್ ಸೌಲಭ್ಯ
ಕೋಲಾರ: ಲೋಕಸಭಾ ಚುನಾವಣೆಗಾಗಿ ಏ.10 ರಂದು ಆರು ವಿಧಾನ ಸಭಾ ಕ್ಷೇತ್ರಗಳ ಕೇಂದ್ರ ಸ್ಥಳಗಳಲ್ಲಿ ಚುನಾವಣಾ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತರಬೇತಿ ದಿನ ನಿಯೋಜಿಸಿರುವ ವಿವಿಧ ತಾಲೂಕುಗಳ ಚುನಾವಣಾ ಸಿಬ್ಬಂದಿಗೆ ತರಬೇತಿ ನಡೆಯುವ ಕೇಂದ್ರ ಸ್ಥಳಗಳಿಗೆ ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ. ಏ.10 ರಂದು ಶ್ರೀನಿವಾಸಪುರದಿಂದ 17, ಮುಳಬಾಗಿಲು 18, ಕೆ.ಜಿ.ಎಫ್. 8 , ಬಂಗಾರಪೇಟೆ 11, ಕೋಲಾರ 15 ಹಾಗೂ ಮಾಲೂರಿನಿಂದ 12 ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮುಳಬಾಗಿಲು ಸರ್ಕಾರಿ ಪದವಿ ಕಾಲೇಜು, ಶ್ರೀನಿವಾಸಪುರ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಬಂಗಾರಪೇಟೆ ಸರ್ಕಾರಿ ಬಾಲಕರ ಕಾಲೇಜು, ಕೋಲಾರ ಸರ್ಕಾರಿ ಬಾಲಕರ ಕಾಲೇಜು ಈ ಸ್ಥಳಗಳಿಗೆ ಚುನಾವಣಾ ಸಿಬ್ಬಂದಿಯನ್ನು ಬಸ್ಗಳಲ್ಲಿ ಕರೆದುಕೊಂಡು ಬರಲಾಗುವುದು.